ನೈತಿಕ ಶಿಕ್ಷಣ ಕಲಿಸುವುದು ಗುರುವಿನ ಕರ್ತವ್ಯ

ppppnnn
ಸಿಂಗಟಗೆರೆ ಕಲ್ಲೇಶ್ವರ ಸಂಯುಕ್ತ ಪದವಿ ಕಾಲೇಜಿನಲ್ಲಿ ಸಾಂಸ್ಕೃತಿಕ ಸ್ಪರ್ಧೆಯನ್ನು ಡಿಡಿಪಿಯು ಪುಟ್ಟಾನಾಯ್ಕ ಉದ್ಘಾಟಿಸಿದರು. ಡಾ. ಜಿ.ವಿ.ಮಂಜುನಾಥ್, ಎಸ್.ಎಸ್.ರಾಜು, ಎಸ್.ಕುಬೇಂದ್ರ, ಬಿ.ಕೆ.ನಾಗರಾಜ್ ಇತರರಿದ್ದರು.
Published on

ಪಂಚನಹಳ್ಳಿ: ಗುರುವಿನ ಸ್ಥಾನ ದೊಡ್ಡದು. ಮಕ್ಕಳಿಗೆ ಪಠ್ಯಪುಸ್ತಕದ ವಿಷಯದ ಜತೆಗೆ ನೈತಿಕ, ಆಧ್ಯಾತ್ಮಿಕ ಶಿಕ್ಷಣ ನೀಡುವುದು ಗುರುಗಳ ಕರ್ತವ್ಯ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟಾನಾಯ್ಕ ತಿಳಿಸಿದರು.

ಗುರುವಾರ ಸಿಂಗಟಗೆರೆ ಕಲ್ಲೇಶ್ವರ ಸಂಯುಕ್ತ ಪದವಿ ಕಾಲೇಜಿನಲ್ಲಿ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ 31ನೇ ಶ್ರದ್ಧಾಂಜಲಿ ಸಮಾರಂಭ ಪ್ರಯುಕ್ತ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಪಾತ್ರ ದೊಡ್ಡದು ಎಂದು ತಿಳಿಸಿದರು.
ಶೆಟ್ಟಿಹಳ್ಳಿ ರಾಮಪ್ಪ ಮಾತನಾಡಿ, ತರಳಬಾಳು ಸಂಸ್ಥಾನ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಶಾಲಾ ಕಾಲೇಜುಗಳನ್ನು ಆರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದೆ ಎಂದರು. ಉಪನ್ಯಾಸಕ ಡಾ. ಜಿ.ವಿ.ಮಂಜುನಾಥ್ ಮಾತನಾಡಿ, ಶ್ರೀ ಶಿವಕುಮಾರ ಸ್ವಾಮೀಜಿ ಗ್ರಾಮೀಣ ಭಾಗದಲ್ಲಿ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿ ನೆರವಾಗಿದ್ದಾರೆ ಎಂದರು.
ಸ್ಥಳೀಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎಸ್.ರಾಜು, ಎಸ್.ಕುಬೇಂದ್ರ, ಬಿ.ಕೆ.ನಾಗರಾಜ್, ಬಿಜೆಪಿ ಮಂಡಲ ಅಧ್ಯಕ್ಷ ಬಿ.ಪಿ.ದೇವಾನಂದ್, ಗ್ರಾಪಂ ಅಧ್ಯಕ್ಷೆ ಜಿ.ಆರ್.ಮಧುಮಾಲಾ, ಗಿರೀಶ್ ಆರಾಧ್ಯ, ಕುಮಾರ್, ಮಲ್ಲಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net