ದುಡಿಯುವ ವರ್ಗವನ್ನು ಗೌರವಿಸುವುದು ಸಮಾಜದ ಕರ್ತವ್ಯ

h.m.somappa
Published on

ಮಡಿಕೇರಿ: ತೋಟಗಳಲ್ಲಿ ದುಡಿಯುವ ಕಾರ್ಮಿಕರನ್ನು ಗೌರವಿಸುವುದು ಸಮಾಜದ ಕರ್ತವ್ಯವಾಗಬೇಕು ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್(ಎಐಟಿಯುಸಿ) ಸಂಘಟನೆಯ ಜಿಲ್ಲಾಧ್ಯಕ್ಷ ಎಚ್.ಎಂ.ಸೋಮಪ್ಪ ಅಭಿಪ್ರಾಯಪಟ್ಟರು.


ಬಿಳಿಗೇರಿಯ ಟಾಟಾ ಕಾಫಿ ಸಂಸ್ಥೆಯಲ್ಲಿ ಕಳೆದ ೩೬ ವರ್ಷಗಳಿಂದ ಕಾರ್ಯನಿರ್ವಹಿಸಿ ನಿವೃತ್ತರಾದ ಕಾರ್ಮಿಕ ಮಹಿಳೆ ಎ.ಯಶೋಧ ಅವರನ್ನು ಎಐಟಿಯುಸಿ ಸಂಘಟನೆ ವತಿಯಿಂದ ಬೀಳ್ಕೊಡಲಾಯಿತು.


ಬಿಳಿಗೇರಿಯ ಟಾಟಾ ಕಾಫಿ ತೋಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಎಚ್.ಎಂ.ಸೋಮಪ್ಪ ಅವರು ಕಾರ್ಮಿಕರನ್ನು ಕೇವಲ ದುಡಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತಗೊಳಿಸಬಾರದು. ಅವರ ಎಲ್ಲಾ ಸಂಕಷ್ಟಗಳಿಗೆ ಸ್ಪಂದಿಸಿ ನಿವೃತ್ತಿ ಹೊಂದುವಾಗ ಗೌರವದಿಂದ ಕಳುಹಿಸಿಕೊಡಬೇಕು ಎಂದರು.


ಇತರ ಕಾರ್ಮಿಕ ಸಂಘಟನೆಗಳಿಗೆ ಮಾದರಿಯಾಗುವ ರೀತಿಯಲ್ಲಿ ಎಐಟಿಯುಸಿ ಸಂಘಟನೆ ಕಾರ್ಯನಿರ್ವಹಿಸುತ್ತಿದೆ. ಯಶೋಧ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.


ಹಿರಿಯರಾದ ನಾರಾಯಣ, ಸಂಜೀವ, ಕಾರ್ಮಿಕ ಮುಖಂಡರಾದ ಗಣೇಶ್, ಲೋಕೇಶ್, ಸೂರ್ಯ ಮತ್ತಿತರ ಕಾರ್ಮಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net