ಹೆತ್ತವರ ಹೆಸರು ಉಳಿಸಿ ಬೆಳೆಸುವುದು ಮಕ್ಕಳ ಕರ್ತವ್ಯ

It is the duty of children to uphold their parents' name.
It is the duty of children to uphold their parents' name.
Published on

ಮಹಾಲಿಂಗಪುರ: ತಮ್ಮ ತಂದೆಯ ಸ್ಮರಣಾರ್ಥ ಧರ್ಮ ಕಾರ್ಯ, ಸಾಮಾಜಿಕ ಸೇವೆ ಮಾಡಿದ ಹಿಟ್ಟಿನಮಠ ಸಹೋದರರ ಕಾರ್ಯ ಶ್ಲಾಘನೀಯ ಎಂದು ಚಿಮ್ಮಡ ವಿರಕ್ತಮಠದ ಪ್ರಭು ಸ್ವಾಮಿಗಳು ಹೇಳಿದರು.

ಪಟ್ಟಣದ ಬರಗಿ ಓಣಿಯಲ್ಲಿ ಮಲ್ಲಯ್ಯ ಅಪ್ಪಯ್ಯ ಹಿಟ್ಟಿನಮಠ ಅವರ ಶಿವಗಣಾರಾಧನೆ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಲಿಂ. ಮಲ್ಲಯ್ಯ ಹಿಟ್ಟಿನಮಠ ಅವರು ಶರಣರಂತೆ ಕಾಯಕದಲ್ಲಿ ಕೈಲಾಸ ಕಂಡವರು ಎಂದರು.

ದಾಸೋಹ, ಸಾಮಾಜಿಕ ಸೇವೆಗಳ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರದೊಂದಿಗೆ ಬೆಳೆಸಿದ್ದಾರೆ. ಅದರ ಲವಾಗಿ ಇಂದು ಮಹಾಂತೇಶ, ಸೋಮಶಂಕರ, ಅಪ್ಪಯ್ಯ ಹಿಟ್ಟಿನಮಠ ಸಹೋದರರು ಅಗಲಿದ ತಂದೆಯ ಸ್ಮರಣಾರ್ಥ ವಿವಿಧ ಸಮಾಜಗಳು ಹಾಗೂ ದೇವಸ್ಥಾನಗಳ ಅಭಿವೃದ್ಧಿಗೆ 18 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಸಾಮಾಜಿಕ, ಧಾರ್ಮಿಕ ಬದ್ಧತೆ ಪ್ರದರ್ಶಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ಮಲ್ಲಯ್ಯ ಹಿಟ್ಟಿನಮಠ ಅವರು ಪಾರದರ್ಶಕ ವ್ಯವಹಾರ, ವ್ಯಾಪಾರದ ಮೂಲಕ ಸಮಾಜದಲ್ಲಿ ಮಾದರಿಯಾಗಿದ್ದರು. ಬಡವರು, ದೀನದಲಿತರು, ಸಂಕಷ್ಟದಲ್ಲಿರುವ ಜನರಿಗೆ ತಮ್ಮ ಕೈಲಾದ ಸಹಾಯ, ಸಹಕಾರ ನೀಡುತ್ತ ಆದರ್ಶ ಜೀವನ ನಡೆಸಿದವರು. ಅವರು ಹಾಕಿಕೊಟ್ಟ ದಾರಿಯಲ್ಲಿ ಅವರ ಸುಪುತ್ರರು ಸಾಮಾಜಿಕ, ಧಾರ್ಮಿಕ ಸೇವೆಗಳ ಮೂಲಕ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಜಂಗಮ ಸಮಾಜದ ಅಧ್ಯಕ್ಷ ಗುರುಪಾದಯ್ಯ ಛಟ್ಟಿಮಠ, ಲಕ್ಷ್ಮಣಗೌಡ ಪಾಟೀಲ, ಮಹಾಂತೇಶ ಹಿಟ್ಟಿನಮಠ, ಸೋಮಶಂಕರ ಹಿಟ್ಟಿನಮಠ, ಅಪ್ಪಯ್ಯ ಹಿಟ್ಟಿನಮಠ, ಮಹಾದೇವಿ ಮಲ್ಲಯ್ಯ ಹಿಟ್ಟಿನಮಠ, ಸುಮಂಗಲಾ ಮಹಾಲಿಂಗಪುರಮಠ, ಮೀನಾಕ್ಷಿ ತೆಲಸಂಗ, ಉಮಾ ಹಿರೇಮಠ, ಬಸವರಾಜ ಹಿಟ್ಟಿನಮಠ, ವಿರೂಪಾಕ್ಷಯ್ಯ ಪಂಚಕಟ್ಟಿಮಠ, ಸಾಗರ ಮಠದ ಇದ್ದರು. ಎಂ.ಎಸ್. ಮಠ ಸ್ವಾಗತಿಸಿ-ನಿರೂಪಿಸಿದರು.

18.70 ಲಕ್ಷ ರೂ. ದೇಣಿಗೆ: ಮಹಾಲಿಂಗೇಶ್ವರ ದೇವಸ್ಥಾನ ಜಾತ್ರಾ ಕಮಿಟಿ, ಚನ್ನಗಿರೇಶ್ವರ ದೇವಸ್ಥಾನ, ಅಕ್ಕಿಮರಡಿ ದೇವಸ್ಥಾನ ಹಾಗೂ ಹಾಲುಮತ, ಹಟಗಾರ, ಕುರುಹಿನಶೆಟ್ಟಿ, ಬಣಜಿಗ, ಪಂಚಮಸಾಲಿ, ರಡ್ಡಿ, ಗಾಣಿಗ, ಉಪ್ಪಾರ, ಮರಾಠ, ಬಜಂತ್ರಿ, ಸಮಗಾರ, ಹರಿಜನ, ಭೋವಿ ವಡ್ಡರ ಸೇರಿ ಹದಿನೈದು ಸಮಾಜಗಳ ಅಭಿವೃದ್ಧಿ ಕಾರ್ಯಕ್ಕಾಗಿ ಹಿಟ್ಟಿನಮಠ ಸಹೋದರರು ತಮ್ಮ ತಂದೆಯವರ ಸ್ಮರಣಾರ್ಥ ಸುಮಾರು 18.70 ಲಕ್ಷ ರೂ. ದೇಣಿಗೆ ನೀಡಿದರು. ತೋಟದಲ್ಲಿ ಕೆಲಸ ಮಾಡುವ ರೈತರಿಗೆ ತಾಮ್ರದ ಹಂಡೆಗಳು ಹಾಗೂ ವಸದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net