ತಂದೆ-ತಾಯಿ ಪೋಷಿಸುವುದು ಮಕ್ಕಳ ಕರ್ತವ್ಯ

IMG20251009202250.jpg
Published on

ಧಾರವಾಡ: ಮಕ್ಕಳ ಭವಿಷ್ಯ ನಿರ್ಮಾಣಕ್ಕಾಗಿ ತಂದೆ-ತಾಯಿ ನಿತ್ಯ ಕಷ್ಟಪಡುತ್ತಾರೆ. ಅದನ್ನು ಮಕ್ಕಳು ಅರ್ಥಮಾಡಿಕೊಂಡು ವಯೋವೃದ್ಧ ತಂದೆತಾಯಿಗಳನ್ನು ಪ್ರೀತಿಯಿಂದ ಪಾಲನೆ-ಪೋಷಣೆ ಮಾಡುವುದು ಮಕ್ಕಳ ಕರ್ತವ್ಯವಾಗಿದೆ ಎಂದು ನಿವೃತ್ತ ಸೇನಾಧಿಕಾರಿ ಬಸವಂತಪ್ಪ ಚಕ್ರಸಾಲಿ ಹೇಳಿದರು.

ನಗರದ ರಂಗಾಯಣ ಸಮಚ್ಛಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸರ್ಮೋದಯ ಟ್ರಸ್ಟ್, ಸ್ಫೂರ್ತಿಧಾಮ ವೃದ್ಧಾಶ್ರಮ ಮತ್ತು ಅನಾಥಾಶ್ರಮದ 5ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಮಾತೃ ವಾಸ್ತಲ್ಯವನ್ನು ನೀಡುವ ಉದ್ದೇಶಕ್ಕಾಗಿ ಆರಂಭವಾದ ಡಿ ಕೇರ್ ಘಟಕ ಉತ್ತಮ ಕಾರ್ಯ ನಿರ್ವಹಿಸಲಿದೆ. ಶಿಲ್ಪಾ ಸತೀಶ್ ಸರ್ಜಾಪುರ ದಂಪತಿ ವಯೋವೃದ್ಧರ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದರು. 5 ವರ್ಷ ಪೂರೈಸಿದ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.

ಟ್ರಸ್ಟ್ ಅಧ್ಯಕ್ಷ ಸತೀಶ್ ಸರ್ಜಾಪುರ, ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ, ಡಾ.ನೀತಾ ಸಾಂಬ್ರಾಣಿ, ಡಾ.ಸಮೀರ್ ಶಾನು, ಮಲ್ಲಿಕಾರ್ಜುನ ಮಠಪತಿ, ನಮ್ರತಾ ಆನೆಗುಂದಿ, ಪಂ.ಪವನ್ ಜೋಶಿ, ಬಸವರಾಜ ಆನೆಗುಂದಿ, ಸತೀಶ್ ಸರ್ಜಾಪುರ, ಶಿಲ್ಪಾ ಸರ್ಜಾಪುರ, ಮಹಾಂತೇಶ ಬೇತೂರುಮಠ, ರಾಘವೇಂದ್ರ ಗಾಮನಗಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net