ವೃದ್ಧ ಪಾಲಕರ ಪೋಷಣೆ ಮಕ್ಕಳ ಕರ್ತವ್ಯ

KDR ho
ಚಿಕ್ಕಪಟ್ಟಣಗೆರೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಿದ್ದಿಬಾಯಿ ಅವರನ್ನು ಗೌರವಿಸಲಾಯಿತು. ಬಿ.ಸಿ.ಗೀತಾ, ಪ್ರಕಾಶ್‌ರಾವ್, ಪ್ರಸಾದ್, ಭಂಡಾರಿ ಶ್ರೀನಿವಾಸ್, ಶಾಲಿನಿ, ಲಕ್ಷ್ಮೀ, ನಾಗರಾಜ್ ಇತರರಿದ್ದರು.
Published on

ಕಡೂರು: ಆಸೆಗಳನ್ನು ತ್ಯಾಗಮಾಡಿ ಬದುಕು ಕೊಟ್ಟ ತಂದೆ, ತಾಯಿಯನ್ನು ವೃದ್ಧಾಪ್ಯದಲ್ಲಿ ನೆಮ್ಮದಿಯಿಂದಿರುವಂತೆ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಿತ್ರದುರ್ಗ ಪ್ರಾದೇಶಿಕ ನಿರ್ದೇಶಕಿ ಬಿ.ಸಿ.ಗೀತಾ ತಿಳಿಸಿದರು.

ಚಿಕ್ಕಪಟ್ಟಣಗೆರೆಯಲ್ಲಿ ಬುಧವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಾತ್ಸಲ್ಯಮಯಿ ಯೋಜನೆಯಲ್ಲಿ ನಿರ್ಮಿಸಿದ ಮನೆಗಳನ್ನು ಸಿದ್ದಿಬಾಯಿ ಮತ್ತು ಸುಭಾಷ್ ನಗರದ ಮಂಜಮ್ಮ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.
ತಂದೆ, ತಾಯಿಗಳ ತ್ಯಾಗದ ಲವಾಗಿ ಉನ್ನತ ಸ್ಥಾನಕ್ಕೇರಿದ ಮಕ್ಕಳು ಅವರನ್ನು ಗೌರವದಿಂದ ಕಾಣುವುದು ಕರ್ತವ್ಯ. ಧರ್ಮಸ್ಥಳ ಯೋಜನೆ ಮೂಲಕ ಹಿರಿಯರಿಗೆ ಪೌಷ್ಟಿಕ ಆಹಾರ, ಅಶಕ್ತ ಮಹಿಳೆಯರಿಗೆ ಮಾಸಾಶನ ನೀಡುತ್ತಲಿದೆ. ಅಶಕ್ತರಿಗೆ, ಬಂಧುಗಳಿಲ್ಲದ ಹಿರಿಯ ಮಹಿಳೆಯರಿಗೆ ಮನೆಗಳನ್ನು ನಿರ್ಮಿಸಿ ಕೊಡುವ ವಾತ್ಸಲ್ಯಮಯಿ ಕಾರ್ಯಕ್ರಮವನ್ನು ಹೇಮಾವತಿ ಹೆಗ್ಗಡೆ ರೂಪಿಸಿದ್ದಾರೆ. ಅದರಂತೆ ಕಡೂರು ಭಾಗದಲ್ಲಿ ಇಬ್ಬರು ಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಲಾಗಿದೆ. ಗ್ರಾಮೀಣ ಮಹಿಳೆಯರ ಸ್ವಾವಲಂಬಿ ಬದುಕಿಗೆ ಧರ್ಮಸ್ಥಳ ಯೋಜನೆ ಸದಾ ಸಹಕಾರಿಯಾಗಿದೆ ಎಂದು ಹೇಳಿದರು.
ಪುರಸಭೆ ಸದಸ್ಯ ಭಂಡಾರಿ ಶ್ರೀನಿವಾಸ್ ಮಾತನಾಡಿ, ಮಹಿಳೆಯರ ಸ್ವಾವಲಂಬಿ ಬದುಕಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವಾಗುತ್ತಿದೆ. ಪುರಸಭೆಯಿಂದಲೂ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷೆ ಶಾಲಿನಿ, ಜ್ಯೋತಿ, ಜಿಲ್ಲಾ ನಿರ್ದೇಶಕ ಪ್ರಕಾಶ್‌ರಾವ್, ಚಿಕ್ಕಪಟ್ಟಣಗೆರೆ ನಾಗರಾಜ್, ಯೋಜನಾಧಿಕಾರಿ ಪ್ರಸಾದ್, ವಲಯ ಮೇಲ್ವಿಚಾರಕ ಅರುಣ್, ಪುರಸಭೆ ಸದಸ್ಯೆ ಜ್ಯೋತಿ ಆನಂದ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಲಕ್ಷ್ಮೀ, ರವಿಶಂಕರ್, ತಿಪ್ಪೇಶ್, ಹಾಗೂ ಸೇವಾಪ್ರತಿನಿಧಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net