೫೧ ನೇ ವರ್ಷದಲ್ಲೂಕಟ್ಟಡ ನಿರ್ಮಾಣವಾಗಿರುವುದು ವಿಶೇಷ

raichur
raichur
Published on

ರಾಯಚೂರು ಭಾರತೀಯ ಕುಟುಂಬ ಯೋಜನೆ ಸಂಘವು ಅನೇಕ ಏಳುಬಿಳುಗಳ ನಡುವೆ ಅಂತರಾಷ್ಟಿçÃಯ ಮಟ್ಟದಲ್ಲಿ ಹೆಸರು ಗಳಿಸಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ನಗರದ ಮಹಾಲಕ್ಷಿ÷್ಮÃ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣ ಮಾಡಿದ ಎ-ï‌ಪಿಎಐನ ಕಚೇರಿ ಉದ್ಘಾಟನೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು

ದೇಶದಲ್ಲಿ ಎ-ï‌ಪಿಎಐ ಕಚೇರಿ ೧೯೯೯ ರಲ್ಲಿ ನಿರ್ಮಾಣವಾದರೆ,ರಾಯಚೂರು ಶಾಖೆ ೧೯೭೩ ರಲ್ಲಿ ಪ್ರಾರಂಭವಾಗಿದೆ. ಅಂತಾರಾಷ್ಟಿçÃಯ ಮಟ್ಟದಲ್ಲಿ ಹೆಸರು ಮಾಡಿದ ಶಾಖೆಗೆ ೫೦ ವರ್ಷ ಪೂರ್ಣಗೊಳಿಸಿ ಇಂದು ೫೧ನೇ ವರ್ಷಕ್ಕೆ ಪಾದಾರ್ಪಣೆ ಮಾಡಲಾಗಿದೆ. ಇವರು ಬಡವರಿಗಾಗಿ ಅನೇಕ ಯೋಜನೆಗಳು ಜಾರಿ ಮಾಡುವುದರ ಮೂಲಕ ಆರೋಗ್ಯ ಜಾಗೃತಿ ಮೂಡಿಸಿದ್ದಾರೆ.

ಸರ್ಕಾರದಿಂದ ಕಟ್ಟಡ ನಿರ್ಮಾಣ ಮಾಡಲು ೧೦ ವರ್ಷಗಳು ಬೇಕಾಗುತ್ತವೆ ಆದರೆ ಎ-ï‌ಪಿಎಐನವರು ತಮ್ಮ ಸ್ವಂತ ಹಣದಿಂದ ದೊಡ್ಡ ಮಟ್ಟದ ಕಟ್ಟಡವನ್ನು ಕೇವಲ ಮೂರು ವರ್ಷದಲ್ಲಿ ನಿರ್ಮಾಣ ಮಾಡಿದ್ದಾರೆ. ಇಲ್ಲಿ ಸದಸ್ಯರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿ ,ನಗರದಲ್ಲಿ ಕಡ ಬಡವರಿಗೆ ಉತ್ತಮವಾದ ಚಿಕಿತ್ಸೆ ನೀಡುತ್ತಾರೆ. ರಾಜ್ಯ ಹಾಗೂ ರಾಷ್ಟç ಮಟ್ಟದಲ್ಲಿ ಸೇವೆ ಮಾಡಿz್ದÁರೆ. ಈ ಪ್ರಯತ್ನ ಇನ್ನು ಹೆಚ್ಚಿನ ಮಟ್ಟದಲ್ಲಿ ಬೆಳೆಯಲಿ ಸಂಘಕ್ಕೆ ಸನ್ನ ಸಹಾಕಾರ ಯಾವಾಗಲು ಇರುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಎ-ï‌ಪಿಎಐನ ಅಧ್ಯಕ್ಷ ಡಾ.ವಿ.ಎ.ಮಾಲೀ ಪಾಟೀಲ್ ಮಾತನಾಡಿ,ಜಿಲ್ಲೆಯ ಜನರ ಲೈಂಗಿಕ ಮತ್ತು ಸಂತ್ತೋನೋತ್ಪತ್ತಿ ಶಿಕ್ಷಣದ ಕುರಿತು ನಮ್ಮ ಸಂಘ ನಿರಂತವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ನಮ್ಮ ಶಾಖೆಯ ಅಽನದಲ್ಲಿ ಒಟ್ಟು ೨೫ವ ಹಳ್ಳಿಗಳು ಹಾಗೂಮ ೦೯ನ ಕೊಳಚೆ ಪ್ರದೇಶಗಳು ಒಳ ಪಡುತ್ತಿದ್ದು, ಶಾಖೆಯ ಎಲ್ಲ ಸದಸ್ಯರಿಂದ ಕೋವಿಡ್ ಸಂದರ್ಭದಲ್ಲಿ ಅನೇಕ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಬಡಜನರಿಗೆ ಮಾಸ್ಕ್ ಹಾಗೂ ಸ್ಯಾನಿಟರ್ ವಿತರಣೆ ಮಾಡಲಾಗಿದೆ. ನಮ್ಮ ಕ್ಲಿನಿಕ್‌ನಲ್ಲಿ ದಿನ ನಿತ್ಯ ಗರ್ಭಿಣಿಯರಿಗೆ ಚಿಕಿತ್ಸೆ ಮಾಡಲಾಗುವುದು. ವಾರದಲ್ಲಿ ಮೂರು ಬಾರಿ ಸುಮಾರು ವರ್ಷಗಳಿಂದ ಶಸöಚಿಕಿತ್ಸೆ ಮಾಡಲಾಗುತ್ತದೆ ಎಂದರು.

ನAತರ ಕಳೆದ ೫೦ ವರ್ಷದಲ್ಲಿ ಅಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಪದಾಽಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಂಘದ ಸದಸ್ಯರಿಗೆ ಗೌರವ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಷ್ಟಿçÃಯ ಅಧ್ಯಕ್ಷೆ ಡಾ.ರತ್ನಮಾಲ ದೇಸಾಯಿ, ಸದಸ್ಯರಾದ ಅಲಿಯಾ ಖಾನಂ,ಡಿಎಚ್‌ಓ ಡಾ.ಸುರೇಂದ್ರ ಬಾಬು,ಶರಣೇಗೌಡ ಪಾಟೀಲï,ಎಸ್.ವಿಜಯಸಿಂಹ ಬಳ್ಳಾರಿ,ಡಾ.ಕಲ್ಪನಾ, ಜಯಣ್ಣ,ನರಸಿಂಹಲು ಮಾಡಗಿರಿ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net