ಪವಿತ್ರವಾದ ರಕ್ಷೆ ತೆಗೆಸಿರುವುದು ಖಂಡನೀಯ

6sgr2
ಸಾಗರದ ಹಿಂದು ಜಾಗರಣಾ ವೇದಿಕೆಯಿಂದ ಮಂಕಳಲೆಯ ಪ್ರೌಢಶಾಲೆಯಲ್ಲಿ ಮಕ್ಕಳು ಧರಿಸುವ ಬೆಲ್ಟ್ ಮತ್ತು ಕೋಟ್‌ಗಳ ಮೇಲೆ ಶಿಲುಬೆ ಚಿತ್ರ ಹಾಕಿರುವುದನ್ನು ತೆಗೆಯುವಂತೆ ಒತ್ತಾಯಿಸಿ ಕ್ಷೇತ್ರ ಶಿಕ್ಷಣಾಽಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಅಶೋಕ್, ಶ್ರೀಕಾಂತ್, ಕೋಮಲ್ ಗಣೇಶ್, ಶ್ರೀಧರ್, ಸಂತೋಷ್, ಉದಯ ಆದಿತ್ಯ ಇತರರಿದ್ದರು.
Published on

ಸಾಗರ: ಮಕ್ಕಳನ್ನು ವ್ಯವಸ್ಥಿತವಾಗಿ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳದ್ದಾಗಿದೆ. ಮಕ್ಕಳ ಮನಸ್ಸು ಹೂವಿನಂತೆ ಮೃದುವಾಗಿರುತ್ತದೆ. ಹಾಗಾಗಿ ಎಚ್ಚರಿಕೆಯಿಂದ ಇರಬೇಕು ಎಂದು ಹಿಂದು ಜಾಗರಣ ವೇದಿಕೆಯ ಮುಖ್ಯಸ್ಥ ಕೆ.ಎಸ್. ಸುಽÃಂದ್ರ ಹೇಳಿದರು.

ಬುಧವಾರ ಸಮೀಪದ ಮಂಕಳಲೆಯ ಪ್ರೌಢಶಾಲೆಯಲ್ಲಿ ಮಕ್ಕಳು ಧರಿಸಿರುವ ಬೆಲ್ಟ್ ಮತ್ತು ಕೋಟ್‌ಗಳ ಮೇಲೆ ಶಿಲುಬೆ ಚಿತ್ರ ಹಾಕಿರುವುದನ್ನು ತೆಗೆಯಲು ಒತ್ತಾಯಿಸಿ ಕ್ಷೇತ್ರ ಶಿಕ್ಷಣಾಕಾರಿಗಳ ಕಚೇರಿ ಎದುರು ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಇತ್ತೀಚೆಗೆ ಪ್ರೌಢಶಾಲೆಯಲ್ಲಿ ಪವಿತ್ರವಾದ ರಕ್ಷಬಂಧನ ಕಾರ್ಯಕ್ರಮದಲ್ಲಿ ರಾಖಿ ಕಟ್ಟಿಕೊಂಡ ಮಕ್ಕಳಿಗೆ ಶಿಕ್ಷಕರು ರಾಖಿ ತೆಗೆಸಿರುವ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಿದ್ದೆವು. ಈ ಸಂದರ್ಭದಲ್ಲಿ ಶಾಲೆಗೆ ಭೇಟಿ ನೀಡಿದಾಗ ಮಕ್ಕಳು ಧರಿಸಿದ್ದ ಬೆಲ್ಟ್ ಮತ್ತು ಕೋಟ್‌ಗಳ ಮೇಲೆ ಶಿಲುಬೆ ಚಿತ್ರವಿರುವುದು ಕಂಡುಬAದಿದೆ. ಶಾಲೆಯಲ್ಲಿ ಎಲ್ಲ ಜಾತಿಯ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾರೆ. ಒಂದು ಧರ್ಮವನ್ನು ಪ್ರತಿನಿಽಸುವ ಚಿತ್ರಗಳನ್ನು ಮಕ್ಕಳ ಬೆಲ್ಟ್ ಮತ್ತು ಕೋಟ್‌ಗಳ ಮೇಲೆ ಹಾಕಿರುವುದನ್ನು ತಕ್ಷಣ ತೆಗಿಸಬೇಕು ಎಂದು ಒತ್ತಾಯಿಸಿ ಕ್ಷೇತ್ರ ಶಿಕ್ಷಣಾಽಕಾರಿಗಳಿಗೆ ಮನವಿ ಸಲ್ಲಿಸಿದರು.
ತಮಿಳುನಾಡಿನ ಕ್ರೀಡಾ ಸಚಿವ ಉದಯನಿಽ ಸ್ಟಾಲಿನ್ ಸನಾತನ ಹಿಂದು ಧರ್ಮದ ಬಗ್ಗೆ ದ್ವೇಷಪೂರಿತ ಮಾತುಗಳನ್ನಾಡಿದ್ದು ಹಿಂದುಗಳ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಭಟನಾಕಾರರು ಸಾಗರ ಉಪವಿಭಾಗದ ಪೊಲೀಸ್ ಉಪಾಽÃಕ್ಷಕರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಅಶೋಕ್, ಶ್ರೀಕಾಂತ್, ಕೋಮಲ್ ಗಣೇಶ್, ಶ್ರೀಧರ್, ಸಂತೋಷ್, ಉದಯ ಆದಿತ್ಯ, ವಿನಯ್ ಶೇಟ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net