

ಕಾರ್ಕಳ: ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ-01ರಲ್ಲಿ ಬೆಳ್ಮಣ್ ಸಮೀಪ ಕಂಚಿನಡ್ಕ ಎಂಬಲ್ಲಿ ಟೋಲ್ ಸಂಗ್ರಹಕ್ಕೆ ಮತ್ತೊಮ್ಮೆ ಮುಂದಾಗಿರುವುದು ಖೇದಕರ. ಈ ಬಗ್ಗೆ ಕಾಂಗ್ರೆಸ್‌ನ ಮೌನವೇಕೆ?. ತಮ್ಮ ವೈಯಕ್ತಿಕ ರಾಜಕೀಯ ಅಸ್ತಿತ್ವ ಉಳಿಸುವುದಕ್ಕೋಸ್ಕರ ಬೆಂಗಳೂರಿಗೆ ಹೋಗಿ ಪ್ರತಿಭಟಿಸುವ ಕಾರ್ಕಳದ ಕಾಂಗ್ರೆಸ್ ನಾಯಕರು, ಟೋಲ್ ಸಂಗ್ರಹ ಮಾಡುವ ಬಗ್ಗೆ ವಿಚಾರಿಸುವ ಕಾಳಜಿ ತೋರಿಸದೇ ಇರುವುದು, ಕಾರ್ಕಳ ಜನತೆ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಿರುವುದನ್ನು ಬಹಿರಂಗಪಡಿಸಿದೆ. ಕಾರ್ಕಳ ಜನತೆ ಬಗ್ಗೆ ಕಾಳಜಿ, ಗೌರವ ಇದ್ದರೆ ತಕ್ಷಣ ಟೋಲ್ ಸಂಗ್ರಹ ಹಿಂಪಡೆಯುವಂತೆ ಮಾಡುವ ಎದೆಗಾರಿಕೆ ತೋರಿಸಲಿ ಎಂದು ಬಿಜೆಪಿ ಮುಖಂಡ ಸೂರ್ಯಕಾಂತ ಶೆಟ್ಟಿ ಕೆದಿಂಜೆ ಆಗ್ರಹಿಸಿದ್ದಾರೆ.