ಬಾಲ್ಯವಿವಾಹ ನಡೆಸುತ್ತಿರುವುದು ವಿಷಾದನೀಯ

It is regrettable that child marriage is practiced.
ಇಳಕಲ್ಲ ತಾಲೂಕಿನ ಹಿರೇಕೊಡಗಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಬಾಲ್ಯವಿವಾಹ ನಿಷೇಧ ಕಾಯ್ದೆ ಜಾಗೃತಿ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಿವಲೀಲಾ ಸರಗಣಾಚಾರಿ ಉದ್ಘಾಟಿಸಿದರು. ಸಾವಿತ್ರಿ ಆಚಾರ್ಯ, ಅನುಪಮಾ ಪಾಡಮುಖಿ, ಡಿ.ಎಚ್. ಮುಕ್ಕಣ್ಣನವರ, ಪೂರ್ಣಿಮಾ ಧೋತ್ರೆ ಮತ್ತಿತರರಿದ್ದಾರೆ.
Published on

ಇಳಕಲ್ಲ(ಗ್ರಾ): ರಾಜ್ಯದಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಸಾಕಷ್ಟು ಕ್ರಮ ಕೈಗೊಳ್ಳಲಾಗಿದ್ದು, ಪಾಲಕರು ಕದ್ದುಮುಚ್ಚಿ ವಿವಾಹ ಮಾಡಿಸುತ್ತಿರುವುದು ವಿಷಾದನೀಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಶಿವಲೀಲಾ ಸರಗಣಾಚಾರಿ ಹೇಳಿದರು.

ಆಶಾದೀಪ ಅಂಗವಿಕಲರ ಸೇವಾ ಸಂಸ್ಥೆ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಸಹಯೋಗದೊಂದಿಗೆ ಹಿರೇಕೊಡಗಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಬಾಲ್ಯವಿವಾಹ ನಿಷೇಧ ಕಾಯ್ದೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೋಕ್ಸೋ ಕಾಯ್ದೆ ಜಾರಿ ತಂದರೂ ಜನರಿಗೆ ಅರ್ಥವಾಗುತ್ತಿಲ್ಲ ಎಂದರು.

ಸಾಂತ್ವನ ಕೇಂದ್ರದ ಸಮಾಜ ಸೇವಾ ಕಾರ್ಯಕರ್ತೆ ಸಾವಿತ್ರಿ ಆಚಾರ್ಯ ಮಾತನಾಡಿ, ಇಳಕಲ್ಲ ಮತ್ತು ಹುನಗುಂದ ಅವಳಿ ತಾಲೂಕುಗಳಲ್ಲಿ ಬಾಲ್ಯವಿವಾಹದ ಬಗ್ಗೆ ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಅನುಪಮಾ ಪಾಡಮುಖಿ ಮಾತನಾಡಿ, ಹಿಂದಿನ ಕಾಲದಿಂದಲೂ ಈ ಅನಿಷ್ಟ ಪದ್ಧತಿ ಜಾರಿಯಲ್ಲಿದೆ. ಪಾಲಕರು ಅದರಿಂದ ದೂರಸರಿದು ಮಕ್ಕಳ ಭವಿಷ್ಯ ರೂಪಿಸಬೇಕು ಎಂದರು.

ಮುಖ್ಯಶಿಕ್ಷಕಿ ಡಿ.ಎಚ್. ಮುಕ್ಕಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಪೂರ್ಣಿಮಾ ಧೋತ್ರೆ, ಎಂ.ಎಸ್. ಕುರಿ, ಡಿ.ಬಿ ಭಾಪ್ರಿ, ಸಚಿನ, ಮೀನಾಕ್ಷಿ ಸಜ್ಜನ, ಸುರೇಶ ಹಡಪದ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net