ಕಷ್ಟ ಮೆಟ್ಟಿ ನಿಂತಾಗ ಸಾಧಕನಾಗಲು ಸಾಧ್ಯ

It is possible to become successful when you overcome difficulties.
ಇಂಡಿ ತಾಲೂಕಿನ ಹಿರೇರೂಗಿಯಲ್ಲಿ ಸಿದ್ಧೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವನ್ನು ಗಣ್ಯರು ಉದ್ಘಾಟಿಸಿದರು. ಶಿರಶ್ಯಾಡದ ಅಭಿನವ ಮುರಘೇಂದ್ರ ಶಿವಾಚಾರ್ಯರು, ಶ್ರೀನಿವಾಸ ರೂಗಿ, ಧರ್ಮರಾಜ ವಾಲಿಕಾರ ಇತರರಿದ್ದರು.
Published on

ಇಂಡಿ: ಜೀವನದಲ್ಲಿ ಅಪಮಾನ, ನಿಂದನೆ, ಕಷ್ಟಗಳನ್ನು ಮೆಟ್ಟಿ ನಿಂತಾಗ ಮಾತ್ರ ಸಾಧಕನಾಗಲು ಸಾಧ್ಯ ಎಂದು ಶಿರಶ್ಯಾಡದ ಅಭಿನವ ಮುರಘೇಂದ್ರ ಶಿವಾಚಾರ್ಯರು ಹೇಳಿದರು.

ತಾಲೂಕಿನ ಹಿರೇರೂಗಿಯ ಸಿದ್ಧೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ಬಿಳ್ಕೋಡುಗೆ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಗ್ರಾಮೀಣ ಭಾಗದ ಕೃಷಿಕರ ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಶಿಕ್ಷಣ ಸಂಸ್ಥೆಗಳು ಮಾಡಬೇಕು. ಹಳ್ಳಿಗಳಲ್ಲೂ ಗುಣಮಟ್ಟದ ಶಿಕ್ಷಣ ಸಿಗುಂತಾಗಬೇಕು ಎಂದರು.

ಶಿಕ್ಷಕ ದಶರಥ ಕೋರಿ ಉಪನ್ಯಾಸ ನೀಡಿದರು. ಬಿಜೆಪಿ ಮುಖಂಡ ಅನೀಲ ಜಮಾದಾರ, ರಮೇಶ ಬೆಲ್ಲದ ಮಾತನಾಡಿದರು.

ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ರೂಗಿ, ಕಾಂಗ್ರೆಸ್ ಮುಖಂಡ ಧರ್ಮರಾಜ ವಾಲಿಕಾರ, ರೇವಣ್ಣಸಿದ್ದ ಪೂಜಾರಿ, ಪೈಗಂಬರ ಅಂಗಡಿ, ಸಂಗಮೇಶ ಬಿರಾದಾರ, ಮಾಳಪ್ಪ ನಿಂಬಾಳ, ಮೋದಿನಸಾಬ ಬಾಗವಾನ, ಜಟ್ಟಪ್ಪ ಸಾಲೋಟಗಿ, ಜಟ್ಟಪ್ಪ ಮರಡಿ, ಜಟ್ಟಪ್ಪ ಮೂಲಿಮನಿ, ಭೀಮರಾಯ ಜೇವೂರ, ಭೀಮರಾಯ ಉಪ್ಪಾರ, ಲಕ್ಷ್ಮಣ ಡಂಗಿ, ಬಾಬುರಾಯ ಮಾವಿನಹಳ್ಳಿ, ಗುರಪ್ಪ ಅಗಸರ, ಇಲಾಯಿ ಬಾಗವಾನ, ನಿಂಗಪ್ಪ ತಳವಾರ, ಸಂಜೀವ ರೂಗಿ ಉಪಸ್ಥಿತರಿದ್ದರು.

ಕಾರ್ಯಾಧ್ಯಕ್ಷ ಶಂಕರಲಿಂಗ ಜಮಾದಾರ ಸ್ವಾಗತಿಸಿದರು. ಶಿಕ್ಷಕ ಆನಂದ ವಾಲಿಕಾರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net