ಶ್ರದ್ಧೆ, ಪರಿಶ್ರಮದಿಂದ ಗುರಿ ಸಾಧಿಸಲು ಸಾಧ್ಯ

24 HHR P 05 (2)
ಹೊಳೆಹೊನ್ನೂರಿನಲ್ಲಿ ಆಯೋಜಿಸಿದ್ದ ಕ್ರೀಡಾ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಹಾಗೂ ಜನಸಂಖ್ಯಾ ದಿನವನ್ನು ಶಾರದಾ ಪೂರ‌್ಯಾನಾಯ್ಕಾ ಉದ್ಘಾಟಿಸಿದರು. ರಾಜಪ್ಪ, ಡಾ.ಅಶೋಕ್, ಸುಶೀಲಾ ಬಾಯಿ ಇತರರಿದ್ದರು.
Published on

ಹೊಳೆಹೊನ್ನೂರು: ಶ್ರದ್ಧೆ, ಸತತ ಪರಿಶ್ರಮದಿಂದ ನಿಗದಿತ ಗುರಿ ಸಾಧಿಸಬಹುದು ಎಂದು ಗ್ರಾಮಾಂತರ ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕ್ರೀಡಾ ಸಾಂಸ್ಕೃತಿಕ ಕಾರ್ಯಾಕ್ರಮಗಳ ಸಮಾರೋಪ ಹಾಗೂ ಜನ ಸಂಖ್ಯಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪದವಿ ನಂತರ ತಮ್ಮಿಷ್ಟದ ನೌಕರಿ ಪಡೆಯುವಂತಾಗಬೇಕು. ಉನ್ನತ ಹುದ್ದೆಗಳಿಸುವ ಪ್ರಯತ್ನ ಕೈ ಬಿಡಬಾರದು. ಯೊಚನಾ ಶಕ್ತಿಯಿಂದ ಎಚ್ಚರದ ಹೆಜ್ಜೆ ಇಡಬೇಕು. ಪ್ರತಿಯೊಬ್ಬರಲ್ಲೂ ತಮ್ಮದೇ ಆದ ಶಕ್ತಿ ಅಡಗಿರುತ್ತದೆ. ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಗುರಿ ತಲುಪಬೇಕು. ಕ್ಷೇತ್ರ ವಿಸ್ತಾರದಲ್ಲಿ ದೊಡ್ಡದಿರುವುದರಿಂದ ಏಕ ಕಾಲದಲ್ಲಿ ಓಡಾಟ ನಡೆಸಲು ಸಾಧ್ಯವಿಲ್ಲ ಎಂದರು.
ಗ್ರಾಮೀಣ ಭಾಗದ ಹಳ್ಳಿಗಳಿಂದ ಹೊಳೆಹೊನ್ನೂರು ಮಾರ್ಗವಾಗಿ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ 350 ವಿದ್ಯಾರ್ಥಿಗಳು ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಅವರಿಎ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ರೂಟ್ ಮ್ಯಾಪ್ ಸಿದ್ಧ ಪಡಿಸಿ ನೀಡುವಂತೆ ಪ್ರಾಚಾರ್ಯರಿಗೆ ತಿಳಿಸಿ ಆದಷ್ಟು ಬೇಗ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ಪ್ರಾಚಾರ್ಯ ರಾಜಪ್ಪ, ತಾಲೂಕು ವೈದ್ಯಾಧಿಕಾರಿ ಡಾ. ಅಶೋಕ್, ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶ್, ಸುಶೀಲಾ ಬಾಯಿ, ಶ್ರೀನಿವಾಸ್, ನಿರ್ಮಲಾ ಗಣೇಶ್, ರೇಣುಕೇಶ್, ಹರೀಶ್, ಆನಂದ ಮೂರ್ತಿ, ಬಿಂದು, ಶಂಕರ್, ಭಾರತಿ ದೇವಿ, ಸುರೇಶ್ ಸಾಗರ್, ಸಹನಾ, ರಾಜು ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net