

ಅರಕಲಗೂಡು : ಆಂಗ್ಲರ ದಾಸ್ಯದಿಂದ ದೇಶವನ್ನು ಮುಕ್ತಗೊಳಿಸಿ ಸ್ವಾತಂತ್ರ್ಯ ಗಳಿಸಿಕೊಡುವಲ್ಲಿ ಸಾವಿರಾರು ರಾಷ್ಟ್ರ ಭಕ್ತರ ತ್ಯಾಗ ಬಲಿದಾನವಿದೆ. ಇದನ್ನು ಉಳಿಸಿಕೊಂಡು ಹೋಗುವ ಮಹತ್ತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ತಹಸೀಲ್ದಾರ್ ಕೆ.ಸಿ.ಸೌಮ್ಯ ತಿಳಿಸಿದರು.
ಪಟ್ಟಣದ ಪಾಳೇಗಾರ ಕೃಷ್ಣಪ್ಪನಾಯಕನ ಕೋಟೆ ಗಣಪತಿ ಕೊತ್ತಲ ಗಣಪತಿ ದೇವಸ್ಥಾನ ಸನ್ನಿಧಿಯಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ, ಗಾನಕಲಾಭೂಷಣ ವಿದ್ವಾನ್ ಡಾ.ಆರ್.ಕೆ.ಪದ್ಮನಾಭ ಅಭಿಮಾನಿಗಳ ಬಳಗ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಮಧ್ಯರಾತ್ರಿ ಆಯೋಜಿಸಿದ್ದ 78 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಶಿಕ್ಷಕರಾದ ಪುರುಷೋತ್ತಮ, ಎ.ಬಿ.ಯತಿರಾಜ್, ಪ್ರವೀಣ್, ಆಟೋ ಧರ್ಮ, ಮನು, ಪುನೀತ್ ಗೌಡ, ರವಿವರ್ಧನ್, ಭೀಮರಾಜ್, ಕಾಫಿ ಗುರು, ಆಟೋ ವಿಜಿ, ಗ್ಯಾಸ್ ಚಂದು ಇತರರು ಇದ್ದರು.