

ಮುಂಡರಗಿ: ತಾಲೂಕಿನ ಡೋಣಿ ಭಾಗದ ಕಪ್ಪತಗುಡ್ಡ ವನ್ಯಜೀವಿಧಾಮದಲ್ಲಿ ಸ್ವಾಗತ ಬಾಗಿಲು, ಅರಣ್ಯ ತಪಾಸಣೆ ಘಟಕ ಹಾಗೂ ಪ್ರವಾಸಿಗರ ಚಾರಣಕ್ಕೆ ಗದಗ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೈ ಶನಿವಾರ ಚಾಲನೆ ನೀಡಿದರು.
ಕಪ್ಪತಗುಡ್ಡ ವನ್ಯಜೀವಿಧಾಮ ಅರಣ್ಯ ಪ್ರದೇಶ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಪ್ರವಾಸಿಗರು ಕಪ್ಪತಗುಡ್ಡದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ಲಾಸ್ಟಿಕ್ ಮುಕ್ತವಾಗಬೇಕು. ಪ್ರವಾಸಿಗರು, ಸಾರ್ವಜನಿಕರು ಅರಣ್ಯ ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದರು.
ಆರ್‌ಎಫ್‌ಒ ವೀರಣ್ಣ ಮರಿಬಸಣ್ಣವರ, ಡೋಣಿ ಗ್ರಾ.ಪಂ. ಅಧ್ಯಕ್ಷೆ ಲತಾ ಕುಂಬಾರ, ಎಂ.ಜಿ. ಕುಲಕರ್ಣಿ, ಶಂಕರಗೌಡ ಜಯನಗೌಡ, ಮಲ್ಲಿಕಾರ್ಜುನ ಕುಂಬಾರ, ಶಾಂತವೀರಗೌಡ ಹೊಸಮನಿ, ನಾಗಪ್ಪ ಹರ್ತಿ, ಭರಮಗೌಡ ಪಾಟೀಲ, ಈಶ್ವರಗೌಡ ಪಾಟೀಲ, ಶರಣಪ್ಪ ಕಟ್ಟಿಮನಿ, ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿ ಇತರರು ಇದ್ದರು.