ರೈತರಿಗೆ ತೊಂದರೆ ನೀಡುವುದು ಸರಿಯಲ್ಲ

ಕುರುಗೋಡು ತಾಲೂಕಿನ ಕಲ್ಲುಕಂಬ ಗ್ರಾಮದ ಸೊಸೈಟಿಗೆ ಕೃಷಿ ಇಲಾಖೆ ಪ್ರಭಾರ ಜಂಟಿ ನಿರ್ದೇಶಕ ಎಚ್.ಎಂ.ಮಂಜುನಾಥ್, ಸಹಾಯಕ ನಿರ್ದೇಶಕ ಗರ್ಜಪ್ಪ ಭೇಟಿ ನೀಡಿ ಯೂರಿಯಾ ರಸಗೊಬ್ಬರದ ಕೊರತೆ ಬಗ್ಗೆ ಪರಿಶೀಲಿಸಿದರು. ಸೊಸೈಟಿ ಅಧ್ಯಕ್ಷ ನಾಗಪ್ಪ, ವ್ಯವಸ್ಥಾಪಕ ಚನ್ನಬಸಪ್ಪ, ಸಿಬ್ಬಂದಿ ನಿರ್ಮಲ್ ಕುಮಾರ್ ಇತರರಿದ್ದರು.

Published on

ಕುರುಗೋಡು: ತಾಲೂಕಿನಲ್ಲಿ ರಸಗೊಬ್ಬರದ ಕೊರತೆ ಇಲ್ಲದಿದ್ದರೂ ಇಲಾಖೆಗೆ ಬೇಡಿಕೆ ಸಲ್ಲಿಸದೆ ರೈತರಿಗೆ ತೊಂದರೆ ನೀಡುವುದು ಸರಿಯಲ್ಲ ಎಂದು ಸೊಸೈಟಿ ಸಿಬ್ಬಂದಿಗೆ ಕೃಷಿ ಇಲಾಖೆ ಪ್ರಭಾರ ಜಂಟಿ ನಿರ್ದೇಶಕ ಎಚ್.ಎನ್.ಮಂಜುನಾಥ್ ತರಾಟೆಗೆ ತೆಗೆದುಕೊಂಡರು.

ತಾಲೂಕಿನ ಕಲ್ಲುಕಂಬ ಗ್ರಾಮದ ಸೊಸೈಟಿಯಲ್ಲಿ ಯೂರಿಯಾ ಕೊರತೆ ಕುರಿತು ಸಾರ್ವಜನಿಕರ ದೂರಿನ ಮೇರೆಗೆ ಶುಕ್ರವಾರ ಭೇಟಿ ನೀಡಿದರು. ಕಲ್ಲುಕಂಬ, ಕೆರೆಕೆರೆ, ಲಕ್ಷ್ಮೀಪುರ ಗ್ರಾಮಕ್ಕೆ ಬೇಕಾದ ಗೊಬ್ಬರಕ್ಕೆ ಬೇಡಿಕೆ ಸಲ್ಲಿಸುವುದು ನಿಮ್ಮ ಜವಾಬ್ದಾರಿ ಎಂದು ಹೇಳಿದರು.

ಸಹಾಯ ನಿರ್ದೇಶಕ ಗರ್ಜಪ್ಪ ಮಾತನಾಡಿ, ಸೊಸೈಟಿ ಮುಂಭಾಗದಲ್ಲಿ ನಿತ್ಯ ಹತ್ತಾರು ರೈತರು ಸರತಿ ಸಾಲಿನಲ್ಲಿ ನಿಂತು ಯೂರಿಯಾಕ್ಕಾಗಿ ಪರದಾಡುತ್ತಾರೆ. ಕೂಡಲೇ ನಮಗೆ ಬೇಡಿಕೆ ಸಲ್ಲಿಸಿದರೆ ಅಗತ್ಯ ಗೊಬ್ಬರ ಸರಬರಾಜು ಮಾಡಲಾಗುವುದು. ರೈತರ ವಿಚಾರದಲ್ಲಿ ವಿಳಂಬ ಧೋರಣೆ ಸರಿಯಲ್ಲ. ಸದ್ಯ ಇಪ್ಪತ್ತು ಟನ್ ಯೂರಿಯಾ ಒದಗಿಸಲಾಗುವುದು. ಮುಂದೆ ಬೇಡಿಕೆಗೆ ಅನುಸಾರ ನೀಡಲಾಗುವುದು ಎಂದರು.

ಸೊಸೈಟಿ ವ್ಯವಸ್ಥಾಪಕ ಚನ್ನಬಸಪ್ಪ ಮಾತನಾಡಿ, ಈ ಹಿಂದೆ ಕರ್ತವ್ಯದಲ್ಲಿದ್ದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು. ಆದರೆ, ಅಗತ್ಯ ಗೊಬ್ಬರ ಒದಗಿಸುವಲ್ಲಿ ತಡವಾಗಿದ್ದರಿಂದ ಈ ಸಮಸ್ಯೆ ಉಲ್ಬಣವಾಗಿದೆ. ಶೀಘ್ರ ಬೇಡಿಕೆ ಸಲ್ಲಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net