‘ಬಿಜೆಪಿ ಕಾರ್ಯಕರ್ತರನ್ನು ಹೆದರಿಸುವುದು ಸರಿಯಲ್ಲ’

'It is not right to scare BJP workers'
Published on

ಮಡಿಕೇರಿ:

ಕಾಂಗ್ರೆಸ್‌ನವರು ಅವರ ಗ್ಯಾರಂಟಿ ಯೋಜನೆಗಳÀ ಮೇಲೆ ಚುನಾವಣೆಗೆ ಹೋಗಲಿ. ನಾವು ಮೋದಿ ಕೆಲಸದ ಮೇಲೆ ಹೋಗುತ್ತೇವೆ. ಅದು ಬಿಟ್ಟು ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಮೊಕ್ಕದಮ್ಮೆ ಹಾಕಿ,
ಅವರನ್ನು ಹೆದರಿಸಿ ಚುನಾವಣೆ ಎದುರಿಸುವುದಾದರೆ ನಾವೂ ಕೈ ಕಟ್ಟಿ ಕೂರುವುದಿಲ್ಲ ಎಂದು ಬಿಜೆಪಿಯ ಇಬ್ಬರು ಮಾಜಿ ಶಾಸಕರು ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ವಿಷಯಗಳನ್ನು ಹಂಚಿಕೊಳ್ಳುತ್ತಿರುವ ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರ ಮೇಲೆ ಒತ್ತಡ ಹೇರಿ ಪ್ರಕರಣ ದಾಖಲಿಸಲಾಗುತ್ತಿದೆ. ಅಂಥ ಸಂದೇಶಗಳನ್ನು ಹುಟ್ಟುಹಾಕಿದವರ ಮೇಲೆ ಪ್ರಕರಣ ದಾಖಲಾಗಬೇಕೇ ವಿನಃ ಹಂಚಿಕೊAಡವರ ಮೇಲೆ ಅಲ್ಲ. ಪೊಲೀಸರು ಪ್ರಕರಣ ದಾಖಲಿಸುವ ಮೊದಲು ಸತ್ಯಾಸತ್ಯತೆ ಪರಿಶೀಲಿಸಬೇಕು. ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಈ ನಿರಂತರ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಗುರುವಾರ ಕುಶಾಲನಗರದಲ್ಲಿ ರಂಜಾನ್ ಆಚರಣೆ ಸಂದರ್ಭ ರಾಷ್ಟಿçÃಯ ಹೆದ್ದಾರಿ ಬಂದ್ ಮಾಡಿಸಿ ರಸ್ತೆ ಮೇಲೆ ನಮಾಜ್ ಮಾಡಲಾಗಿದೆ. ಇದು ಅಪರಾಧ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಇದು ಸ್ಪಷ್ಟವಾಗಿ ನೀತಿ ಸಂಹಿತೆಯ ಉಲ್ಲಂಘನೆ. ಇದಕ್ಕೆ ಕಾಂಗ್ರೆಸ್ ಕುಮ್ಮಕ್ಕು ಕೊಡುತ್ತಿದೆ. ಜಿಲ್ಲಾಡಳಿತ ಏಕಪಕ್ಷೀಯವಾಗಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಮತ್ತು ಅದರಲ್ಲಿರುವ ಜನಪ್ರತಿನಿಧಿಗಳು ಸಾಮಾಜಿಕ ವಾತಾವರಣ ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹಿಂದಿನ ಶಾಸಕರು ಏನು ಕೆಲಸ ಮಾಡಿಲ್ಲ ಎಂದು ತಮ್ಮ ವಿರುದ್ಧ ಈಗಿನ ಶಾಸಕರು ಅಪಪ್ರಚಾರ ಮಾಡುತ್ತಿದ್ದಾರೆ. ಅದರೆ ಅವರು ತಮ್ಮದೆಂದು ಹೇಳಿಕೊಳ್ಳುತ್ತಿರುವ ಅನುದಾನಗಳೆಲ್ಲಾ ಹಿಂದಿನ ಬಿಜೆಪಿ ಸರ್ಕಾರ ಇರುವಾಗಲೇ ಆಡಳಿತಾತ್ಮಕ ಅನುಮೋದನೆ ಸಿಕ್ಕಿರುವಂಥದ್ದು. ಒಂದು ವೇಳೆ ಅವರು ಅನುದಾನ ತಂದಿದ್ದು ನಿಜವಾದಲ್ಲಿ ಸರ್ಕಾರದ ಆದೇಶ ಪ್ರತಿ ತೋರಿಸಲಿ ಎಂದು ಸವಾಲು ಹಾಕಿದರು.

ಭಾಗಮಂಡಲದಲ್ಲಿ ಯಾವುದೇ ಕಾಮಗಾರಿ ನಡೆಸಬೇಕಾದರೂ ತಂತ್ರಿಗಳ ಸಲಹೆ ಪಡೆಯಬೇಕು. ಅಷ್ಟಮಂಗಲ ಪ್ರಶ್ನೆ ಇಡಬೇಕು ಎನ್ನುವ ತೀರ್ಮಾನ ಆಗಿತ್ತು. ಆದರೆ ಈಗ ಏಕಾಏಕಿ ಕಾಮಗಾರಿ ನಡೆಸಲಾಗುತ್ತಿದೆ. ಬಜೆಟ್‌ನಲ್ಲಿ ರೈಲ್ವೆ ಬ್ಯಾರಿಕೇಡ್‌ಗೆಂದು 120 ಕೋಟಿ ರೂ. ಮೀಸಲಿಡಲಾಗಿತ್ತು. ಆ ಕೆಲಸ ಎಲ್ಲಿ ಆಗಿದೆ ಎಂದು ತಿಳಿಸಲಿ ಎಂದು ಹೇಳಿದರು.
ಅರಣ್ಯ ವಸ್ತುಗಳ ಕಾಯಿದೆ ಸಂಬAಧ ಸುತ್ತೋಲೆ ವಾಪಸ್ ತೆಗೆದುಕೊಳ್ಳಬಹುದಿತ್ತು. ಆದರೆ ಸರ್ಕಾರದ ವಿರುದ್ಧ ಸರ್ಕಾರದ ಪ್ರತಿನಿಧಿಯೇ ಕೋರ್ಟ್ಗೆ ಹೋಗಿದ್ದಾರೆ. ಇಂಥ ನಾಟಕ ಹೆಚ್ಚು ದಿನ ನಡೆಯುವುದಿಲ್ಲ ಎಂದರು.

ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅಥವಾ ಎ. ಮಂಜು ಇಬ್ಬರಲ್ಲಿ ಯಾರು ಎನ್ನುವುದೇ ಗೊಂದಲ ಆಗಿದೆ. ಮೊದಲು ಅಧಿಕಾರಿಗಳನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಬೇಕು. ವೈದ್ಯರು, ಪಿಡಿಒಗಳ ಜಿಲ್ಲೆಯಿಂದ ವರ್ಗಾ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಕೊಡಗಿನಲ್ಲಿ ವೈದ್ಯರ ಹುದ್ದೆ ಭರ್ತಿ ಮಾಡುವ ಕೆಲಸ ಆಗಲಿ. ಮಡಿಕೇರಿಗೆ ಎಂಆರ್‌ಐ ಸ್ಕಾö್ಯನಿಂಗ್ ಘಟಕ ನಮ್ಮ ಅವಧಿಯಲ್ಲೇ ಮಂಜೂರು ಆಗಿತ್ತು. ಸೋಮವಾರಪೇಟೆ ಟರ್ಫ್ ಮೈದಾನ ಕಾಮಗಾರಿಯೂ ಪೂರ್ಣಗೊಂಡಿತ್ತು. ಆದರೆ ಇವೆರಡೂ ತಾವೇ ಮಾಡಿದ್ದು ಎಂದು ಮಂತರ್ ಗೌಡ ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದರು

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ (ಏ.14)ಮೈಸೂರಿಗೆ ಬರುತ್ತಿದ್ದಾರೆ. ಈ ಸಂದರ್ಭ ಜಿಲ್ಲೆಯಿಂದ ಸುಮಾರು 10 ಸಾವಿರ ಮಂದಿ ಮೈಸೂರಿಗೆ ತೆರಳಲಿದ್ದಾರೆ. ಇದಕ್ಕಾಗಿ 100 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮಾಜಿ ಎಂಎಲ್‌ಸಿ ಸುನಿಲ್ ಸುಬ್ರಮಣಿ, ಪಕ್ಷದ ಪ್ರಮುಖರಾದ ಅಶ್ವಿನ್ ಸತೀಶ್,
ನಾಗೇಶ್ ಕುಂದಲ್ಪಾಡಿ, ಮಹೇಶ್ ಜೈನಿ, ಕಿರಣ್, ತಳೂರು ಕಿಶೋರ್, ಸುಬ್ರಹ್ಮಣ್ಯ ಉಪಾಧ್ಯ ಇದ್ದರು.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net