ಸಿ.ಟಿ.ರವಿ ಪ್ರಕರಣ ಸಿಐಡಿಗೆ ಒಪ್ಪಿಸಿದ್ದು ಸರಿಯಲ್ಲ

mp B y Raghavendra
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ
Published on

ಶಿವಮೊಗ್ಗ: ಎಂಎಲ್‌ಸಿ ಸಿ.ಟಿ.ರವಿ ಅವರ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ಒಪ್ಪಿಸಿರುವುದು ಸರಿಯಲ್ಲ. ಕಾಂಗ್ರೆಸ್ ಪೂರ್ವಗ್ರಹ ಇಟ್ಟುಕೊಂಡು ಏಜೆನ್ಸಿಗೆ ತನಿಖೆಗೆ ನೀಡಿದಂತೆ ಕಂಡುಬರುತ್ತಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ದೂರಿದರು.

ಪೂರ್ವಗ್ರಹ ಇಟ್ಟುಕೊಂಡು ಏಜೆನ್ಸಿಗೆ ತನಿಖೆಗೆ ನೀಡಿದಂತೆ ಕಂಡುಬರುತ್ತಿದೆ ಎಂದು ಲೋಕಸಭಾ ಸದಸ್ಯ ರಾಘವೇಂದ್ರ ದೂರಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣಕ್ಕೆ ಕೈಹಾಕಿದೆ. ಸಿ.ಟಿ.ರವಿ ಅವರಿಗೆ ಪೊಲೀಸರ ಮೂಲಕ ದೈಹಿಕವಾಗಿ ಹಲ್ಲೆ ಮಾಡಿಸಲಾಗಿದೆ ಎಂದು ಕಿಡಿಕಾರಿದ್ದಾರೆ.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ದ್ವೇಷ ಕಾರಲಾಗಿತ್ತು. ಪಂಚಮಸಾಲಿ ಸಮಾಜದ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿದ ಪೊಲೀಸ್ ಅಧಿಕಾರಿಯನ್ನು ಗುರುತಿಸಿ ಸನ್ಮಾನಿಸುವ ಮೂಲಕ ಆ ಸಮುದಾಯದ ಕೆಂಗಣ್ಣಿಗೆ ಕಾಂಗ್ರೆಸ್ ಗುರಿಯಾಗಿತ್ತು ಎಂದರು.

ಇದೇ ವೇಳೆ ಬೆಳಗಾವಿಯಲ್ಲಿ ಕಾಂಗ್ರೆಸ್ ಗಾಂಧೀಜಿ ಅವರು ಭೇಟಿ ನೀಡಿದ 100 ವರ್ಷಗಳ ಸಂಭ್ರಮಾಚರಣೆಗೆ ಅಣಿಯಾಗಿದೆ. ದ್ವೇಷ ಇಟ್ಟುಕೊಂಡು ಗಾಂಧೀಜಿ ಕಾರ್ಯಕ್ರಮಕ್ಕೆ ಮುಂದಾಗಿರುವುದು ಕಾಂಗ್ರೆಸ್‌ನ ನೈತಿಕತೆಗೆ ಧಕ್ಕೆ ತರಲಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net