ಶ್ರೀರಾಮನನ್ನು ಇನ್ನೊಬ್ಬರಿಗೆ ಹೋಲಿಸುವುದು ಸರಿಯಲ್ಲ

Mtm Swamiji
Published on

ರಾಯಚೂರು: ಶ್ರೀರಾಮ ಎಲ್ಲರಿಗೂ ಅನುಕರಣೀಯ ಮತ್ತು ಆದರ್ಶ ವ್ಯಕ್ತಿ. ಶ್ರೀರಾಮನನ್ನು ಇನ್ನೊಬ್ಬರಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ರಾಮನ ಹೆಸರು ಇಟ್ಟುಕೊಂಡಿದ್ದಾರೆ. ಅವರು ಕೂಡಾ ಶ್ರೀರಾಮನಂತೆ ಆದರ್ಶ, ವಿಶೇಷ ಜನಾನುರಾಗ ಪಡೆಯಲಿ ಎಂದರು.
ಶಾಸಗಳಲ್ಲಿಯೂ ನೀರು ಹೇಗಿರಬೇಕು ಅಂತ ಕೇಳಿದಾಗ ಶ್ರೀರಾಮನಂತೆ ನೀನು ಇರು ಅಂತಾ ಹೇಳುತ್ತಾರೆ. ಹೀಗಾಗಿ ನಾವು ಶ್ರೀರಾಮನಂತೆ ಆದರ್ಶಪ್ರಾಯವಾಗಬೇಕೆ ಹೊರತು ಶ್ರೀರಾಮನಿಗೆ ಮತ್ತೊಬ್ಬರನ್ನು ಹೋಲಿಸುವ ಕೆಲಸ ಮಾಡಬಾರದು.
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಉದ್ಘಾಟನೆ ಆಗುತ್ತಿರುವುದು ಸಂತೋಷದಾಯಕವಾಗಿದೆ. ರಾಮ ಮಂದಿರ ಒಂದು ಜನಾಂಗ, ಪ್ರಾಂತಕ್ಕೆ ಸಿಮೀತವಾಗಿಲ್ಲ. ಅದು ಸಮಗ್ರ ಭಾರತೀಯರ ಸಂತೋಷದಾಯ ಕಾರ್ಯಕ್ರಮವಾಗಿದೆ. ನಾನು ಅನೇಕ ಬಾರಿ ಅಯೋಧ್ಯೆಗೆ ಹೋಗಿದ್ದೇನೆ.
ಉದ್ಘಾಟನಾ ಕಾರ್ಯಕ್ರಮದ ಆಮಂತ್ರಣ ನಮಗೂ ಬಂದಿದೆ. ನನಗೆ ಪೂರ್ವ ನಿಯೋಜಿತ ಕಾರ್ಯಕ್ರಮ ಇರುವುದರಿಂದ ಕಾರ್ಯಕ್ರಮಕ್ಕೆ ಹೋಗುವ ಪ್ರಯತ್ನ ಮಾಡುತ್ತೇನೆ. ನಮ್ಮ ಶಿಲೆ ಅಯೋಧ್ಯೆಗೆ ಹೋಗುತ್ತಾ ಇರುವುದು ನಮ್ಮ ಹೆಮ್ಮೆಯಾಗಿದೆ ಎಂದು ಡಾ.ಸುಬುಧೇಂದ್ರ ತೀರ್ಥರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net