

ವಿಜಯಪುರ : ಇತ್ತೀಚಿನ ಕೆಲ ವರ್ಷಗಳಲ್ಲಿ ವಿಪ್ರರು ರಾಜಕೀಯ ಕ್ಷೇತ್ರದಿಂದ ವಿಮುಖರಾಗುತ್ತಿದ್ದಾರೆ. ಇದು ಉತ್ತಮ ಬೆಳೆವಣಿಗೆಯಲ್ಲ್ಲ ನಮ್ಮ ಸಮಾಜ ಸುಧಾರಣೆಯಾಗಬೇಕಾದರೆ ವಿಪ್ರ ಯುವಕರು ರಾಜಕೀಯ ಕ್ಷೇತ್ರದತ್ತ ಮುಖಮಾಡಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ರಾಜಕೀಯ ವೇದಿಕೆ ಅಧ್ಯ ರಾವೇಂದ್ರ ಮಯ್ಯ ಸಲಹೆ ನೀಡಿದರು.
ನಗರದ ದತ್ತ ಮಂದಿರದಲ್ಲಿ ಜರುಗಿದ ಭಗವಾನ ಪರಶುರಾಮ ಜಯಂತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಾಹಿತಿ ಆನಂದ ಕುಲಕರ್ಣಿ, ಪತ್ರಕರ್ತ ಸುಶೀಲೇಂದ್ರ ನಾಯಕ, ಬಿ.ಒ.ಐ. ಜಿಲ್ಲಾಧ್ಯ ಸಂತೋಷ ಕುಮಾರ ದೇಶಪಾಂಡೆ, ಪ್ರಮುಖರಾದ ವೆಂಕಟೇಶ ಕುಲಕರ್ಣಿ, ಕೃಷ್ಣಾಜಿ ಕುಲಕರ್ಣಿ, ಅನಿತಾ ಪದಕಿ, ರಾಧಾ ಕುಲಕರ್ಣಿ, ರಾಧಾ ತಾವರಗೆರೆ, ಉಮೇಶ ಕುಲಕರ್ಣಿ, ಗೋವಿಂದ ದೇಶಪಾಂಡೆ, ರಜನಿಕಾಂತ ಕುಲಕರ್ಣಿ, ಶ್ರೀಪಾದ ನಾನಜಕರ, ಸಂತೋಷ ಜೋಶಿ, ಸಂಪತ ಕುಮಾರ ಕುಲಕರ್ಣಿ, ಗೋಪಾಲ ಕುಲಕರ್ಣಿ ಉಪಸ್ಥಿತರಿದ್ದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಆಯ್ಕೆಯಾದ ಸತೀಶಚಂದ್ರ ಕುಲಕರ್ಣಿ ಮತ್ತು ಬಾಗಲಕೋಟೆ ಜಿಲ್ಲಾ ಪ್ರತಿನಿಧಿ ಗುರುರಾಜ ಗೊಂಬಿ ಅವರನ್ನು ಸನ್ಮಾನಿಸಲಾಯಿತು.