ವೀರಶೈವ-ಲಿಂಗಾಯತ ಇಬ್ಭಾಗವಾದರೆ ಒಳ್ಳೆದಾಗಲ್ಲ

IMG20251003182125.jpg
Published on

ಧಾರವಾಡ: ವೀರಶೈವ ಲಿಂಗಾಯತ ಒಂದೆಯಾಗಿದ್ದು, ಲಿಂಗಾಯತ ಎಂದು ಪ್ರತ್ಯೇಕ ಶಬ್ದ ಬಳಸುವವರು ಯಾವುದೋ ಆಮಿಷಕ್ಕೆ ಒಳಗಾಗಿದ್ದಾರೆ. ವೀರಶೈವ ಲಿಂಗಾಯತ ಸಮಾಜಕ್ಕೂ ಅವರು ಕಂಟಕ ಎಂದು ಶಿರಹಟ್ಟಿಯ ಶ್ರೀ ಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವ ಸಂಸ್ಕೃತಿ ಯಾತ್ರೆಯು ಸಮಾಜಕ್ಕೆ ಕೊಡಲಿ ಪೆಟ್ಟು ಕೊಡಲಿದೆ. ಯಾತ್ರೆಗೆ ಸಮಾಜ ಬೆಲೆ ಕೊಡಬಾರದು. ಸದಾಕಾಲ ಸಮಾಜ ಹಾಳು ಮಾಡುವ ಗುಂಪಾಗಿ ಇವರು ಹೊರ ಹೊಮ್ಮಿದ್ದಾರೆ. ವೀರಶೈವ ಲಿಂಗಾಯತ ಇಬ್ಭಾಗವಾದರೆ ಸಮಾಜಕ್ಕೆ ಒಳ್ಳೆಯದಾಗಲು ಸಾಧ್ಯವಿಲ್ಲ. ಸಮೀಕ್ಷೆ ವೇಳೆ ಧರ್ಮದ ಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ವೀರಶವ ಲಿಂಗಾಯತ ಹಾಗೂ ಉಪಜಾತಿ ಕಾಲಂನಲ್ಲಿ ನಿಮ್ಮ ಪಂಗಡದ ಹೆಸರು ಬರೆಸಬೇಕು. ಇದನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು ಎಂದರು.

ಏಳು ಕೋಟಿ ಜನಸಂಖ್ಯೆ ಇರುವ ಕರ್ನಾಟಕದಲ್ಲಿ ಕೆಲವೇ ದಿನಗಳಲ್ಲಿ ಸಮೀಕ್ಷೆ ಮಾಡುತ್ತೇವೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ? ಸಮೀಕ್ಷೆ ಮಾಡುವ ಗಣತಿದಾರರು ಮನೆಗೆ ಬಂದಾಗ ಅವರ? ನೋವು ನೋಡಿದರೆ ಅಗತ್ಯತೆ ಇತ್ತಾ ಎನಿಸುತ್ತದೆ. ಸಮೀಕ್ಷೆಯಿಂದ ಏನೂ ಪ್ರಯೋಜನ ಇಲ್ಲ. ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ. ಸರ್ಕಾರ ಇಷ್ಟು ತರಾತುರಿಯಲ್ಲಿ ಏಕೆ ಮಾಡುತ್ತಿದೆ ಎಂದು ಪ್ರಶ್ನಿಸಿದರು. ಯಾವುದೇ ಸರ್ಕಾರ ಧರ್ಮದ ವಿಚಾರದಲ್ಲಿ ಕೈ ಹಾಕಿದರೆ ಮುಂದೆ ಸಮಸ್ಯೆ ಅನುಭವಿಸುತ್ತವೆ ಎಂದು ಎಚ್ಚರಿಸಿದರು.

ಮಠ-ಮಾನ್ಯಗಳಲ್ಲಿ ಆನೆಗಳನ್ನು ಬಳಸಬಾರದು ಎನ್ನುವ ಮೇನಕಾ ಗಾಂಧಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಇವರೆಲ್ಲ ದೇಶದ್ರೋಹಿ ಮಾತ್ರವಲ್ಲದೇ ಸಂಸ್ಕೃತಿ ದ್ರೋಹಿಗಳು. ಸಾವಿರಾರು ವರ್ಷಗಳ ಪರಂಪರೆಗೆ ಧಕ್ಕೆತರುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net