ಗ್ರಾಮಾಂತರ ಪ್ರದೇಶಗಳಲ್ಲಿ ಸಹಕಾರ ಸಂಘ ನಡೆಸುವುದು ಸುಲಭವಲ್ಲ

23 HHR P 05 (2)
ಯಡೇಹಳ್ಳಿಯ ಭದ್ರಾ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಎರಡನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಎಂ.ಪಾಲಾಕ್ಷಪ್ಪ ಮಾತನಾಡಿದರು. ಎಸ್.ಎಚ್.ರಾಜಪ್ಪ, ಎಚ್.ಆರ್.ಕಾಂತರಾಜ್, ಕೆ.ಎಂ.ಬೈರೇಶ್, ಎನ್.ಸೋಮಶೇಖರಯ್ಯ ಇತರರಿದ್ದರು.
Published on

ಹೊಳೆಹೊನ್ನೂರು: ಪುಟ್ಟದಾಗಿ ಆರಂಭವಾದ ಸಂಘವೊಂದು ಎರಡನೇ ವರ್ಷದಲ್ಲಿ ಲಾಭದತ್ತ ಹೆಜ್ಜೆ ಹಾಕುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಭದ್ರಾ ಬಸವೇಶ್ವರ ಸಂಘದ ಅಧ್ಯಕ್ಷ ಎಂ.ಪಾಲಾಕ್ಷಪ್ಪ ಹೇಳಿದರು.

ಯಡೇಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಭದ್ರಾ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರ ಸಂಘದ ಎರಡನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಪೈಪೋಟಿ ಮಧ್ಯೆ ಗ್ರಾಮೀಣದಲ್ಲಿ ಸಹಕಾರ ಸಂಘಗಳನ್ನು ಹುಟ್ಟು ಹಾಕಿ ನಡೆಸಿಕೊಂಡು ಹೋಗುವುದು ಸವಾಲಿನ ಕೆಲಸ ಎಂದರು.
ಪ್ರತಿಯೊಬ್ಬರು ಆರ್ಥಿಕ ಶಿಸ್ತು ಮೈ ಗೂಡಿಸಿಕೊಳ್ಳುವತ್ತ ಗಮನ ಹರಿಸಬೇಕು. ಆರ್ಥಿಕ ಶಿಸ್ತು ವ್ಯಕ್ತಿಗಳಲ್ಲಿ ಆತ್ಮವಿಶ್ವಾಸ ಬೆಳೆಸುವಲ್ಲಿ ಸಹಕಾರಿ. ಸಂಘದಲ್ಲಿ ನಡೆಯುವ ಸಭೆಗಳಿಗೆ ಸದಸ್ಯರು ನಿಯಮಿತವಾಗಿ ಹಾಜರಾಗಬೇಕು. ಷೇರುದಾರರ ಸಂಖ್ಯೆಗಳ ಹೆಚ್ಚಳಕ್ಕೆ ಶ್ರಮಿಸಲಾಗುತ್ತಿದೆ. ಸಂಘಕ್ಕೆ ಸಂಪನ್ಮೂಲ ಅತ್ಯವಶ್ಯಕತೆ ಇರುವುದರಿಂದ ಸದಸ್ಯರು ದೀರ್ಘಾವಧಿ ಠೇವಣಿ ಇಟ್ಟು ಸಂಘದ ವ್ಯವಹಾರಕ್ಕೆ ಕೈ ಜೋಡಿಸಬೇಕು. ಷೇರುದಾರರು ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಭಲರಾಗಬೇಕು. ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಬೇಕು. ಮೌಲ್ಯವರ್ಧಿತ ಉತ್ಪಾದಕಗಳ ಮೇಲೆ ಬಂಡವಾಳ ಹಾಕಿದರೆ ಅಂದುಕೊಂಡಂತೆ ಲಾಭ ಗಳಿಸಬಹುದು. ಮುಂದಿನ ದಿನಗಳಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸದಸ್ಯರಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗುವುದು ಎಂದರು.
ಉಪಾಧ್ಯಕ್ಷ ಎಸ್.ಎಚ್.ರಾಜಪ್ಪ, ಎಚ್.ಆರ್.ಕಾಂತರಾಜ್, ಕೆ.ಎಂ.ಬೈರೇಶ್, ಎನ್.ಸೋಮಶೇಖರಯ್ಯ, ಶಿವಾನಂದಪ್ಪ, ಕಲ್ಮನೆ ಶಿವಣ್ಣ, ಆರ್.ಗಣೇಶ್, ಎಚ್.ಸುಮಿತ್ರಾ, ಯು.ನಿರ್ಮಲಾ, ಕೆ.ಪಿ.ಕಿರಣ್ ಕುಮಾರ್, ನಂಜುಂಡಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net