ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ

18blrp1
ಕರ್ನಾಟಕ ರಾಜ್ಯ ಸ್ಪಂದನ ಸಿರಿ ತಾಲೂಕು ವೇದಿಕೆಯಿಂದ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಬಿ.ಕೆ.ರಾಘವೇಂದ್ರ, ಆಶಾ ಕಿರಣ್, ದಿವ್ಯಕುಮಾರ್, ಕೇಶವ ಕಿರಣ್, ಪ್ರತಿಭಾರಾಮಯ್ಯ, ಸುಮಾ, ರಜಣಿ, ಗೀತಾ ಇತರರಿದ್ದರು.
Published on

ಬೇಲೂರು: ಕ್ಯಾನ್ಸ್‌ರ್ ಎಂಬುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತಿದ್ದು ಈ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಹಾಸನ ಹಿಮ್ಸ್‌ನ ಕ್ಯಾನ್ಸರ್ ತಜ್ಞ ಡಾ.ಬಿ.ಕೆ.ರಾಘವೇಂದ್ರ ಹೇಳಿದರು.

ಪಟ್ಟಣ ಸಮೀಪದ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಸ್ಪಂದನ ಸಿರಿ ತಾಲೂಕು ವೇದಿಕೆಯಿಂದ ಗುರುವಾರ ಆಯೋಜಿಸಿದ್ದ ಕ್ಯಾನ್ಸರ್ ರೋಗ ಲಕ್ಷಣ ಹೇಗೆ ಹರಡುತ್ತದೆ ಎಂಬ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಮನುಷ್ಯನಿಗೆ ರೋಗ ಬರುವುದು ಸಹಜ. ಆದರೆ ಆ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಆಡಂಭರದ ಜೀವನ ಶೈಲಿಗೆ ಮಾರು ಹೋಗಿರುವ ನಾವು ಅನಾರೋಗ್ಯಕ್ಕೆ ತುತ್ತಾಗುವ ಆಹಾರ ಪದಾರ್ಥಗಳು ಹಾಗೂ ಕಲಬೆರಕೆ ವಸ್ತುಗಳ ಬಳಕೆಯಿಂದ ಮತ್ತು ನಮ್ಮ ಆರೋಗ್ಯದತ್ತ ಗಮನ ಹರಿಸದ ಕಾರಣ ಇಂತಹ ಮಾರಕ ಕಾಯಿಲೆಗಳು ಮನುಷ್ಯರನ್ನು ಕಾಡುತ್ತಿವೆ. ಈ ಕಾಯಿಲೆ ಹರಡುವಿಕೆಗೆ ಕೆಲ ಲಕ್ಷಣಗಳು ಬಂದ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಗೆ ಮುಂದಾಗಬೇಕು. ಅಲ್ಲದೆ ಪ್ರತಿಯೊಬ್ಬರೂ ರೋಗ ಬಂದ ನಂತರ ಚಿಕಿತ್ಸೆಗಾಗಿ ಒದ್ದಾಡುವುದನ್ನು ಬಿಟ್ಟು ರೋಗ ಬಾರದಂತೆ ಹೇಗೆ ತಡೆಗಟ್ಟಬಹುದು ಎಂಬುದನ್ನು ತಿಳಿದು ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಮುಂದಾಗಬೇಕು ಎಂದರು.

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಜಿಲ್ಲಾಧ್ಯಕ್ಷೆ ಆಶಾ ಕಿರಣ್ ಮಾತನಾಡಿ, ಕ್ಯಾನ್ಸರ್ ಎಂಬುದು ಒಂದು ಮಾರಕ ಕಾಯಿಲೆ. ಇತ್ತೀಚೆಗೆ ಇದು ಚಿಕ್ಕವರು ದೊಡ್ಡವರು ಎನ್ನದೆ ಎಲ್ಲರನ್ನೂ ಕಾಡುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಎಚ್ಚರಿಕೆ ವಹಿಸಿ ರೋಗ ಬಾರದಂತೆ ತಡೆಗಟ್ಟಲು ಮುಂದಾಗಬೇಕು. ಇದಕ್ಕಾಗಿ ನಮ್ಮ ಆಹಾರ ಪದ್ಧತಿ, ಜೀವನ ಶೈಲಿಯನ್ನು ಬದಲಾಯಿಸಿಕೊಂಡು ಉತ್ತಮ ಆರೋಗ್ಯದೊಂದಿಗೆ ಜೀವನ ನಡೆಸಬೇಕು ಎಂದರು.

ಬಿಜಿಎಸ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ದಿವ್ಯಕುಮಾರ್, ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಕೇಶವ ಕಿರಣ್, ತಾಲೂಕು ಅಧ್ಯಕ್ಷೆ ಪ್ರತಿಭಾಮಯ್ಯ, ಕಾರ್ಯದರ್ಶಿ ಸುಮಾ, ಸಮಿತಿಯ ರಜನಿ, ಗೀತಾ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net