ಕುಡಾ, ಬುಡಾ ಪ್ರತ್ಯೇಕಗೊಳಿಸುವುದು ಅನಿವಾರ್ಯ

22222
Published on

ಕೆಜಿಎಫ್​: ಅವಿಭಜಿತ ಬಂಗಾರಪೇಟೆ ತಾಲೂಕಿನ ಭಾಗವಾಗಿ ಕೆಜಿಎಫ್​ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಜಿಎಫ್​ ನಗರಾಭಿವೃದ್ಧಿ ಪ್ರಾಧಿಕಾರವನ್ನು ಕುಡಾ(ಕೆಜಿಎಫ್​ ಅರ್ಬನ್​ ಡೆವೆಲಪ್​ಮೆಂಟ್​ ಅಥಾರಿಟಿ) ಮತ್ತು ಬುಡಾ(ಬಂಗಾರಪೇಟೆ ಅರ್ಬನ್​ ಡೆವಲೆಪ್​ಮೆಂಟ್​ ಅಥಾರಿಟಿ) ಎಂದು ಪ್ರತ್ಯೇಕಗೊಳಿಸಲು ವಿಶೇಷ ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ವೇಳೆ ಶಾಸಕಿ ಎಂ.ರೂಪಕಲಾ ಮಾತನಾಡಿ, ನಗರಾಭಿವೃದ್ಧಿ ಪ್ರಾಧಿಕಾರವನ್ನು ಕುಡಾ ಮತ್ತು ಬುಡಾ ಎಂದು ಎರಡು ಭಾಗಗಳನ್ನಾಗಿ ಮಾಡುತ್ತಿರುವುದಕ್ಕೆ ಜನರು ಯಾವುದೇ ಗೊಂದಲಗಳಿಗೆ ಒಳಗಾಗುವ ಅವಶ್ಯಕತೆಯಿಲ್ಲ. ನೂತನವಾಗಿ ರಚನೆಯಾಗಲಿರುವ ಕೆಜಿಎಫ್​ ತಾಲೂಕಿನ ಕುಡಾ ವ್ಯಾಪ್ತಿಗೆ ರಾರ್ಬಟ್​ಸನ್​ಪೇಟೆ, ಬೇತಮಂಗಲ ಮತ್ತು ಕ್ಯಾಸಂಬಳ್ಳಿ ಹೋಬಳಿಗಳು ಹಾಗೂ ಸುಂದರಂಪಾಳ್ಯ, ವಿ.ಕೋಟ ಸಮೀಪ ನಿರ್ಮಾಣವಾಗುತ್ತಿರುವ ಎಪಿಎಂಸಿ ಜಾಗ ಸೇರ್ಪಡೆ ಆಗಲಿದ್ದು, ತಾಲೂಕು ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದರು.

ಇದಲ್ಲದೇ ಕೆಜಿಎಫ್​ನ 1 ಸಾವಿರ ಎಕರೆ ಪ್ರದೇಶದಲ್ಲಿ ಕಾರ್ಖಾನೆಗಳು ಸ್ಥಾಪನೆಯಾಗಲಿದ್ದು, ಕೆಜಿಎಫ್​ ನಗರಾಭಿವೃದ್ಧಿ ಪ್ರಾಧಿಕಾರವು ಉತ್ತಮ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅನುಕೂಲವಾಗಲಿದೆ. ಇದರಿಂದ ಆರ್ಥಿಕವಾಗಿಯೂ ಉತ್ತಮ ಸ್ಥಾನಮಾನಗಳಿಸಲು ಸಹಕಾರಿಯಾಗಲಿದೆ ಎಂದರು.

ಬಂಗಾರಪೇಟೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಮಾತನಾಡಿ, ಕೆಜಿಎಫ್​ ತಾಲೂಕಿಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಪ್ರಾಧಿಕಾರವು ಕೆಜಿಎಫ್​ನಲ್ಲಿ ಕಾರ್ಯನಿರ್ವಹಿಸಲಿದೆ. ಪ್ರಾಧಿಕಾರವನ್ನು ಪ್ರತ್ಯೇಕ ಮಾಡುವುದರಿಂದ ಬಂಗಾರಪೇಟೆ ಮತ್ತು ಕೆಜಿಎಫ್​ ಎರಡೂ ತಾಲೂಕುಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ. ಅಲ್ಲದೇ ಎರಡೂ ನಗರಗಳು ಪ್ರಗತಿಯತ್ತ ಸಾಗಲಿದ್ದು, ಪ್ರತ್ಯೇಕ ತಾಲೂಕುಗಳಲ್ಲಿ ಅಧಿಕಾರಿಗಳು ಕೆಲಸ ಮಾಡಲು ಸುಲಭವಾಗಲಿದೆ ಎಂದರು.

ಬುಡಾ ವ್ಯಾಪ್ತಿಗೆ (ಬಂಗಾರಪೇಟೆ ಅರ್ಬನ್​ ಡೆವಲೆಪ್​ಮೆಂಟ್​ ಅಥಾರಿಟಿ) ಬಂಗಾರಪೇಟೆ ತಾಲೂಕಿನ ಕಸಬಾ, ಬೂದಿಕೊಟೆ ಮತ್ತು ಕಾಮಸಮುದ್ರ ಎರಡೂ ಹೋಬಳಿಗಳ 5 ಕಿ.ಮೀ. ವರೆಗಿನ ಪ್ರದೇಶಗಳು ಸೇರಲಿವೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದ್ದು, ಪ್ರಾಧಿಕಾರವು ಪ್ರತ್ಯೇಕವಾಗುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದರು.

ಪ್ರಾಧಿಕಾರದ ಅಧ್ಯಕ್ಷ ಗೋಪಾಲರೆಡ್ಡಿ, ಕೆಜಿಎ್​ ನಗರಸಭೆ ಅಧ್ಯೆ ಇಂದಿರಾಗಾಂಧಿ, ಪ್ರಾಧಿಕಾರದ ಆಯುಕ್ತ ಧಮೇರ್ಂದ್ರ, ನಗರಸಭೆ ಪೌರಾಯುಕ್ತ ಪವನ್​ಕುಮಾರ್​, ಎಇಇ ಮಂಜುನಾಥ್​ ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿದ್ದರು.

16 ಎಕರೆ ಕೆರೆ ಪ್ರದೇಶ ಅಭಿವೃದ್ಧಿಗೆ 1.20 ಕೋಟಿ

ಬಂಗಾರಪೇಟೆ ತಾಲೂಕಿನ ಡಿ.ಕೆ.ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸರ ಹೊಸಹಳ್ಳಿ ಗ್ರಾಮದ ಸರ್ವೇ ನಂ.66ರಲ್ಲಿನ 16 ಎಕರೆ ಕೆರೆ ಪ್ರದೇಶವನ್ನು 1.20 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಪಡಿಸುವುದು. ರಾರ್ಬಟ್​ಸನ್​ಪೇಟೆ ಹೋಬಳಿಯ ಮಾರಿಕುಪ್ಪಂ ಗ್ರಾಮದ ಸರ್ವೇ ನಂ.20/2ರ 2.26 ಗುಂಟೆಯಲ್ಲಿ ವಸತಿ ನಿವೇಶನ ವಿನ್ಯಾಸಕ್ಕೆ ತಾಂತ್ರಿಕ ಒಪ್ಪಿಗೆ ನೀಡುವುದು, ಕೆಜಿಎಫ್​ ತಾಲೂಕು ಮಶಿಕಂ ಗ್ರಾಮದ ಸರ್ವೇ ನಂ. 70/2ರಲ್ಲಿ 2.04 ಎಕರೆ ಜಾಗದಲ್ಲಿ ಉದ್ಯಾನವನ ಮತ್ತು ವಸತಿ ಉದ್ದೇಶಕ್ಕೆ ಭೂ&ಉಪಯೋಗ ಮರು ನಿಗದಿ ಮಾಡಲು ಸಭೆ ಒಪ್ಪಿಗೆ ಸೂಚಿಸಿತು.

ಇಂಟಿಗ್ರೇಟೆಡ್​ ಟೌನ್​ಶಿಪ್​ ಮೀಸಲು

ಜಾಗದಲ್ಲಿನ ಮರಗಳ ತೆರವು

ಇಂಟಿಗ್ರೇಟೆಡ್​ ಟೌನ್​ಶಿಪ್​ಗಾಗಿ ಕಾಯ್ದಿರಿಸಿರುವ 294 ಎಕರೆ ಪ್ರದೇಶದಲ್ಲಿ ಬೆಳೆದಿರುವ ಮರಗಿಡಗಳನ್ನು ಕಟಾವು ಮಾಡುವುದು, ಪ್ರಾಧಿಕಾರದ ಒಡೆತನದಲ್ಲಿರುವ ಒಟ್ಟು 41 ನಾಗರಿಕ ಸೌಲಭ್ಯಕ್ಕಾಗಿ ಮೀಸಲಿಟ್ಟಿರುವ ನಿವೇಶಗಳನ್ನು ಮಾರಾಟ ಮಾಡಲು ಸರ್ಕಾರದಿಂದ ಅನುಮತಿ ಪಡೆಯುವುದು, ಕೆಜಿಎಫ್​ ನಗರಾಭಿವೃದ್ಧಿ ಪ್ರಾಧಿಕಾರವು ರಚನೆ ಮಾಡಿರುವ ರಾಜೀವ್​ ಗಾಂಧಿ ವಸತಿ ಬಡಾವಣೆಯ 631 ಅಡಿ ಮತ್ತು 563 ಅಡಿಗಳ ವಿಸ್ತೀರ್ಣದ ಎರಡು ನಿವೇಶನಗಳನ್ನು ಒಟ್ಟುಗೂಡಿಸುವುದಕ್ಕೆ ಹಾಗೂ ವಲಯ ನಿಯಮಾವಳಿ ಅವಕಾಶದಂತೆ ನರ್ಸಿಂಗ್​ ಹೋಂ ಕಂ ಹಾಸ್ಪಿಟಲ್​ ನಿರ್ಮಾಣಕ್ಕೆ 2 ಕಟ್ಟಡಗಳ ನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿ

ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಇಲ್ಲದೆ ಕಟ್ಟಗಳನ್ನು ನಿರ್ಮಿಸುತ್ತಿರುವವರ ವಿರುದ್ಧ ಆಯುಕ್ತರು ಕಠಿಣ ಕ್ರಮ ಕೈಗೊಂಡು ಕಟ್ಟಡವನ್ನು ನೆಲಸಮ ಮಾಡಲು ಸಭೆಯಲ್ಲಿ ಸೂಚನೆ ನೀಡಲಾಯಿತು. ಅಗತ್ಯವಿದ್ದಲ್ಲಿ ಪೊಲೀಸ್​ ಸಹಕಾರ ಪಡೆದುಕೊಂಡು ಅನಧಿಕೃತ ಕಟ್ಟಡಗಳಿಗೆ ಕಡಿವಾಣ ಹಾಕಬೇಕೆಂದು ಬಂಗಾರಪೇಟೆ ಮತ್ತು ಕೆಜಿಎಫ್​ ೇತ್ರಗಳ ಶಾಸಕರು ಆಯುಕ್ತರಿಗೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net