ಮಕ್ಕಳಿಗೆ ವೇದಿಕೆ ಕಲ್ಪಿಸುವುದು ಅಗತ್ಯ

h24-sparsham
Published on

ಹುಬ್ಬಳ್ಳಿ: ಮಕ್ಕಳ ದಿನಾಚರಣೆ ನಿಮಿತ್ತ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್ ವತಿಯಿಂದ ನಗರದ ಹೊಸೂರಿನ ಗೋಲ್ಡನ್ ಟೌನ್‌ನಲ್ಲಿರುವ ಸ್ಪರ್ಶಂ ಮಕ್ಕಳ ಆಸ್ಪತ್ರೆಯಲ್ಲಿ ಶನಿವಾರ ಮಕ್ಕಳಿಗಾಗಿ ಚಿತ್ರಕಲೆ ಹಾಗೂ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು.

777 ಚಾರ್ಲಿ ಚಲನಚಿತ್ರದ ಅತ್ಯುತ್ತಮ ಬಾಲನಟಿ ಶಾರ್ವರಿ ವಿ. ಅತಿಥಿಯಾಗಿ ಆಗಮಿಸಿ ಮಾತನಾಡಿ, ಮಕ್ಕಳಿಗೆ ವೇದಿಕೆ ಸಿಗುವುದು ಅಪರೂಪ. ಆದರೆ, ಮಕ್ಕಳು ಛದ್ಮವೇಷ ಧರಿಸಿ ಮಾತನಾಡುತ್ತಿರುವುದು ಖುಷಿ ಕೊಟ್ಟಿತು. ಚಿತ್ರಕಲೆ ಮೂಲಕ ಅನೇಕ ವಿಷಯಗಳನ್ನು ಮಕ್ಕಳು ಹೊರಗಡೆ ಹಾಕಿದ್ದಾರೆ. ಇಂಥ ವೇದಿಕೆ ಕಲ್ಪಿಸಿದ ಆಸ್ಪತ್ರೆಯವರಿಗೆ ಧನ್ಯವಾದಗಳು ಎಂದರು.

ಚಿತ್ರಕಲೆ ಸ್ಪರ್ಧೆಯಲ್ಲಿ ಸಾನ್ವಿ ಯರಿಗೊಪ್ಪ (ಪ್ರಥಮ), ಸುಖದಾ ಮುರಗೋಡ (ದ್ವಿತೀಯ), ಪ್ರಿಯಾಲ್ ಕಬಾಡೆ (ತೃತೀಯ), ಛದ್ಮವೇಶ ಸ್ಪರ್ಧೆಯಲ್ಲಿ ಅವನೀಶ ನವಲಗುಂದ (ಪ್ರಥಮ), ಸಾನ್ವಿ (ದ್ವಿತೀಯ), ಪಿಯಾಲ್ ಕಬಾಡೆ (ತೃತೀಯ), ಸಾತ್ವಿಕ್ ಕೆ.(ನಾಲ್ಕನೇ), ಜೋಹಾ ಪಠಾಣ (ಐದನೇ) ಅವರಿಗೆ ಡಾ. ಮಹೇಶ ಹೊಳೆಣ್ಣನವರ, ರೋಟರಿ ಕ್ಲಬ್ ಅಧ್ಯಕ್ಷ ದಿನೇಶ ಶೆಟ್ಟಿ ಬಹುಮಾನ ವಿತರಿಸಿದರು.

ಆಸ್ಪತ್ರೆ ಆಡಳಿತಾಧಿಕಾರಿ ಆನಂದ ಬಾಳಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net