ಭೂಮಿ ರಕ್ಷಣೆ ಮಾಡುವುದು ಅಗತ್ಯ

Published on

ಮೈಸೂರು: ನಗರದ ನಿರ್ಮಲ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.


ಆಸ್ಪತ್ರೆ ನಿರ್ದೇಶಕ ಡಾ.ಬಸವರಾಜು ಮಾತನಾಡಿ, ಭೂಮಿಯಿಂದ ನಾವೇ ಹೊರತು ನಮ್ಮಿಂದ ಭೂಮಿಯಲ್ಲ. ಆದ್ದರಿಂದಲೇ ಈ ವರ್ಷದ ಘೋಷವಾಕ್ಯವಾದ ಭೂಮಿಯ ರಕ್ಷಣೆ, ಭೂ ಸವೆತದಿಂದ ಹಾಗೂ ಮರು ಭೂಮಿಕರಣದಿಂದ ಭೂಮಿಯನ್ನು ಕಾಯ್ದುಕೊಳ್ಳುವಿಕೆಯ ಮೂಲಕ ಪರಿಸರ ರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆಯಾಗಿದೆ.

ಉತ್ತಮ ಪರಿಸರವನ್ನು ಕಾಯ್ದುಕೊಳ್ಳುವ ಮೂಲಕ ಪ್ರತಿಯೊಬ್ಬರೂ ಆರೋಗ್ಯದಿಂದ ಇರಬಹುದಾಗಿದೆ. ಆದ್ದರಿಂದ ಪರಿಸರ ರಕ್ಷಣೆಗೆ ಇಂದೇ ಎಲ್ಲರೂ ಪಣ ತೊಡೋಣ ಎಂದು ಕರೆ ನೀಡಿದರು.


ಅಂದಾಜು 500 ಗಿಡಗಳನ್ನು ನೆಟ್ಟು ಬೆಳೆಸುವ ಆಶಯವನ್ನು ಆಸ್ಪತ್ರೆಯ ನಿರ್ದೇಶಕರು ಹೊಂದಿರುವುದನ್ನು ತಿಳಿಸಿದರು. ಆಸ್ಪತ್ರೆ ವತಿಯಿಂದ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಿಡಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು. ಆಸ್ಪತ್ರೆ ಸುತ್ತಮುತ್ತ ಗಿಡಗಳನ್ನು ನೆಡಲಾಯಿತು.


ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ. ನಿರ್ಮಲಾ, ಸರ್ಜನ್ ಡಾ. ಮನು ಪ್ರಸಾದ್, ವೈದ್ಯರಾದ ಡಾ. ಕೃಷ್ಣಕುಮಾರ್ ಹಾಗೂ ಮುರಳಿ, ಡಾ.ಮುಕುಂದ್, ಡಾ.ಜೀವನ್, ನಿರ್ಮಲ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net