ಹುತಾತ್ಮರ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ

IMG20250125213314.jpg
Published on

ಬೆಳಗಾವಿ: ಬಂಕಿಮ ಚಂದ್ರ ಚಟರ್ಜಿ ಬರೆದ ವಂದೇ ಮಾತರಂ ಗೀತೆ ಸ್ವಾತಂತ್ರ್ಯ ಸಂಗ್ರಾಮದ ಪ್ರೇರಣಾ ಮಂತ್ರವಾಗಿತ್ತು. ಇಂದಿಗೂ ವಂದೇ ಮಾತರಂ ಎಲ್ಲ ಭಾರತೀಯರ ಜಯಘೋಷವಾಗಿದೆ. ಆದರೆ, ಅದರ ಇತಿಹಾಸ ಮತ್ತು ರಚನಾಕಾರರ ಬಗ್ಗೆ ಇಂದಿನ ಯುವಪೀಳಿಗೆಗೆ ಮಾಹಿತಿ ಇಲ್ಲವೆಂದು ರಾಷ್ಟ್ರ ಸೇವಿಕಾ ಸಮಿತಿ ಅಖಿಲ ಭಾರತೀಯ ಸಹ ಕಾರ್ಯವಾಹಿಕಾ ಅಲಕಾತಾಯಿ ಇನಾಮದಾರ ವಿಷಾದ ವ್ಯಕ್ತಪಡಿಸಿದರು.

ನಗರದ ಬಿ.ಕೆ. ಮಾಡೆಲ್ ಶಾಲೆ ಆವರಣದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯಿಂದ ಆಯೋಜಿಸಿದ್ದ ‘ವಂದೇ ಮಾತರಂ ದಿವ್ಯ ಮಂತ್ರದ ಭವ್ಯ ಪರಿಚಯ ಮತ್ತು ಭಾರತ ಮಾತಾ ಪೂಜನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ಪಡೆದು ಹಲವು ವರ್ಷಗಳೇ ಪೂರೈಸಿದರೂ ಈಗಿನ ಕೆಲ ಮಕ್ಕಳಲ್ಲಿ ದೇಶಕ್ಕಾಗಿ ಬಲಿದಾನ ಮಾಡಿದ ಹುತಾತ್ಮರ ಬಗ್ಗೆ ಗೊತ್ತೆ ಇಲ್ಲ ಎಂದರು.

ವಂದೇ ಮಾತರಂ ರಚನೆಯಾಗಿ 150 ವರ್ಷ ತುಂಬಿದ ಹಿನ್ನೆಲೆ ಸಾಮೂಹಿಕ ಗಾಯನ ಮತ್ತು ಭಾರತ ಮಾತೆಯ ಪೂಜೆ ನೆರವೇರಿಸಲಾಯಿತು. ಭಾರತೀಯ ಸೈನಿಕ ತರಬೇತಿ ಕೇಂದ್ರ ನಿವೃತ್ತ ಅಧಿಕಾರಿ ಶರಶ್ಚಂದ್ರ ರಾವಜಿ ಮುಂಡರಗಿ, ನಗರ ಕಾರ್ಯವಾಹಿಕಾ, ಡಾ. ಭವ್ಯಾ ಸಂಪಗಾರ, ವಿದ್ಯಾ ಜೋಶಿ, ವಾಣಿ ರಮೇಶ, ಉಜ್ವಲಾ ಬಡವನಾಚೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net