ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದು ಅಗತ್ಯ

30HDK00005
Published on

ಎಚ್.ಡಿ.ಕೋಟೆ: ಪ್ರತಿಯೊಬ್ಬ ಮನುಷ್ಯನು ಸಮಾಜ ಸೇವೆ ಮೂಲಕ ನೊಂದವರಿಗೆ, ಬಡವರಿಗೆ ಸಹಾಯ ಮಾಡಿದಾಗ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಅಲ್ಪಸ್ವಲ್ಪ ಮಟ್ಟಿಗಾದರೂ ಅನುಕೂಲವಾಗಲಿದೆ ಎಂದು ಪುರಸಭಾ ಸದಸ್ಯ ಮಿಲ್ ನಾಗರಾಜು ತಿಳಿಸಿದರು.


ಪಟ್ಟಣದಲ್ಲಿ ನಂಬಿಕೆ ಫುಡ್ ಪ್ರಾಡಕ್ಟ್ ಒಪಿಸಿ ಪ್ರೈ.ಲಿ. ಹಾಗೂ ಸ್ವರಾಲಯ ಮ್ಯೂಸಿಕ್ ಟ್ರಸ್ಟ್ ಸಹಯೋಗದಲ್ಲಿ ಚಿತ್ರನಟ ದಿ.ಪುನೀತ್ ರಾಜಕುಮಾರ್ ಸ್ಮರಣಾರ್ಥವಾಗಿ ಆದಿವಾಸಿ ಜನರಿಗೆ ಬೆಡ್‌ಶೀಟ್ ವಿತರಣೆ ಹಾಗೂ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತಾಡಿದರು.


ಕಳೆದ 20 ವರ್ಷದಿಂದಲೂ ಸ್ವಯಂ ಉದ್ಯೋಗ ನಡೆಸಿ ಅದರಲ್ಲಿ ಬಂದ ಆದಾಯದಲ್ಲಿ ಶೇ.3ರಷ್ಟು ಹಣವನ್ನು ಸಮಾಜ ಸೇವೆ ಕೆಲಸಗಳಿಗೆ ತೊಡಗಿಸುತ್ತಿದ್ದೇನೆ. ನಮ್ಮ ತಾಲೂಕಿನಲ್ಲಿ ಬಡವರು, ಕೂಲಿ ಕಾರ್ಮಿಕರು ರೈತಾಪಿ ವರ್ಗದ ಕುಟುಂಬಗಳು ಹೆಚ್ಚು ವಾಸಿಸುತ್ತಿದ್ದು ಇವರಿಗೆ ಸರ್ಕಾರದ ಸವಲತ್ತುಗಳು ಸಮರ್ಪಕವಾಗಿ ತಲುಪುತ್ತಿಲ್ಲ. ಹಾಗಾಗಿ ಉದ್ಯಮದಲ್ಲಿ ತೊಡಗಿಸಿಕೊಂಡವರು ತಮಗೆ ಬಂದಂತಹ ಲಾಭದಲ್ಲಿ ಇಂತಹ ಕುಟುಂಬಗಳಿಗೆ ಸೇವಾ ಮನೋಭಾವದಲ್ಲಿ ಕೆಲಸ ಕಾರ್ಯಗಳನ್ನು ಮಾಡಿದಾಗ ಆ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು.


ಮುಂದಿನ ದಿನದಲ್ಲಿ ನಾನು ಮತ್ತು ನಮ್ಮ ಸಂಗಡಿಗರು ಪ್ರತಿ ಗ್ರಾಮಗಳಲ್ಲಿ ಮತ್ತು ಹಾಡಿಗಳಿಗೆ ಭೇಟಿ ನೀಡಿ ಆರೋಗ್ಯ, ಶಿಕ್ಷಣ, ಸಿರಿಧಾನ್ಯದ ಬಗ್ಗೆ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅರಿವು ಮೂಡಿಸುವಂತ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.


ಇದೇ ಸಂದರ್ಭದಲ್ಲಿ ಪದ್ಮಶ್ರೀ ಪಡೆದ ಗಿರಿಜನ ಸೋಮಣ್ಣ, ಹೈರಿಗೆ ಶಿವರಾಜ್, ನಟರಾಜ್, ಶಿವಯ್ಯ, ಶಶಿಧರ್, ಸಿಂಗರ್ ಸಿದ್ದರಾಜು, ರಾಮಣ್ಣ, ಭೀಮನಹಳ್ಳಿ ಸೋಮೇಶ್, ಉಮೇಶ್, ದೊಡ್ಡವೀರ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net