ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವುದು ಅವಶ್ಯ

5ATHANI1.jpg
Published on

ಅಥಣಿ: ಮಕ್ಕಳಿಗೆ ಪರಿಣಾಮಕಾರಿಯಾಗಿ ನೈತಿಕ ಶಿಕ್ಷಣ, ಮಾನವೀಯ ವೌಲ್ಯ ಕಲಿಸಿಕೊಡುವುದು ಅಗತ್ಯ ಎಂದು ಚಿಕ್ಕೋಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕಚೇರಿ ವಿಷಯ ಪರಿವೀಕ್ಷಕ ಎಸ್.ಎಸ್.ಹೂಗಾರ ಹೇಳಿದರು.

ಅಥಣಿ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕ, ಶಿಕ್ಷಕಿಯರಿಗೆ ದಕ್ಷ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್.ಎಸ್.ಹೂಗಾರ, ಸುರೇಶ ಚಿಕ್ಕಟ್ಟಿ, ಹಬೀಬ ಖತೀಬ್, ದಿನೇಶ ಶೆಟ್ಟಿ, ಸವಿತಾ ಹಿರೇಮಠ, ಅಶ್ವಿನಿ ದೇಸಾಯಿ, ಸದಾಶಿವ ಚಿಕ್ಕಟ್ಟಿ ಇದ್ದರು.
ಅಥಣಿ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕ, ಶಿಕ್ಷಕಿಯರಿಗೆ ದಕ್ಷ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್.ಎಸ್.ಹೂಗಾರ, ಸುರೇಶ ಚಿಕ್ಕಟ್ಟಿ, ಹಬೀಬ ಖತೀಬ್, ದಿನೇಶ ಶೆಟ್ಟಿ, ಸವಿತಾ ಹಿರೇಮಠ, ಅಶ್ವಿನಿ ದೇಸಾಯಿ, ಸದಾಶಿವ ಚಿಕ್ಕಟ್ಟಿ ಇದ್ದರು.

ಪಟ್ಟಣದ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ 2023-34ನೇ ಸಾಲಿನ ತಾಲೂಕುಮಟ್ಟದ ದಕ್ಷ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯು ಖಾಸಗಿ ಶಾಲೆಯಾಗಿದ್ದರೂ ಕೂಡ ಸರ್ಕಾರಿ ಶಾಲೆಯ ಉತ್ತಮ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಹೊಸ ಇತಿಹಾಸ ಎಂದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ ಚಿಕ್ಕಟ್ಟಿ ಮಾತನಾಡಿ, 7 ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ಸಂಸ್ಥೆಯಿಂದ ಪ್ರಶಸ್ತಿ ನೀಡುತ್ತ ಬಂದಿದ್ದೇವೆ ಎಂದರು.

ಉಪನ್ಯಾಸಕ ಹಬೀಬ್ ಖತೀಬ್ ಮಾತನಾಡಿದರು. ಯಂಕಚ್ಚಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ದಿನೇಶ ಶೆಟ್ಟಿ, ಕವಲಗುಡ್ಡದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ಅಶ್ವಿನಿ ದೇಸಾಯಿ, ಕೊಕಟನೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಸವಿತಾ ಹಿರೇಮಠ ಅವರಿಗೆ ದಕ್ಷ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಿಆರ್‌ಸಿ ಗೌಡಪ್ಪ ಖೋತ, ಶಿಕ್ಷಕರಾದ ಕಿರಣ ಬುರ್ಲಿ, ರಾಜು ಕೆಂಚಣ್ಣವರ, ಸಂತೋಷ ಅಸ್ಕಿ, ಸದಾಶಿವ ಚಿಕ್ಕಟ್ಟಿ,, ಟಿ.ಎ.ಮೊಗೆರ, ವಿಶ್ವನಾಥ ಸೋದರ, ಚಂದ್ರಕಾಂತ ಮೊಗೆರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net