

ನವಲಗುಂದ: ದೇಶಕ್ಕಾಗಿ ತ್ಯಾಗ, ಬಲಿದಾನಗೈದು ಹುತಾತ್ಮರಾದ ವೀರಯೋಧರ ಶಾಸನಗಳು, ಪುತ್ಥಳಿಗಳನ್ನು ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸ್ಥಾಪಿಸಿ ಅವರನ್ನು ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ನಾಗರಿಕರು ಸ್ಮರಿಸಬೇಕು ಎಂದು ಎಂ.ಎನ್. ಹಾರೋಗೇರಿ ಹೇಳಿದರು.
ಅಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ಪಟ್ಟಣದ ಶ್ರೀ ಶಂಕರ ಮಹಾವಿದ್ಯಾಲಯ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಮೇರಿ ಮಾಟಿ ಮೇರಾ ದೇಶ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಾಧ್ಯಾಪಕರಾದ ಶೀಲಾ ತುಬಚಿ, ಪಿ.ಜಿ. ಕೊಪ್ಪದ, ಆರ್.ಪಿ. ಚವ್ಹಾಣ, ಬಿ.ಕೆ. ಬಂಕಾಪುರ, ಆರ್.ಎಸ್. ಹಿರೇಮಠ, ಜಿ.ಎಸ್. ಚಿಣಗಿ, ಸ್ವಾತಿ ಕಟ್ಟಿ, ವಿಜಯಲಕ್ಷ್ಮೀ ಸಾವಂತ, ಎಸ್.ಪಿ. ಬಗಲಿ, ಬಿ.ಕೆ. ಮಹೇಶ, ಇತರರು ಉಪಸ್ಥಿತರಿದ್ದರು.