ಮಕ್ಕಳಿಗೆ ಕಲಿಕಾ ವಾತಾವರಣ ನಿರ್ಮಿಸುವುದು ಅಗತ್ಯ

Untitled design (12)
ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿಯ ಉರ್ದು ಶಾಲೆಯಲ್ಲಿ ಮಂಗಳವಾರ ಪಾಲಕರು ಬೋಧನಾ ಮಾದರಿಗಳನ್ನು ಶಿಕ್ಷಕರಿಗೆ ಹಸ್ತಾಂತರಿಸಿದರು. ಶಿಕ್ಷಕರಾದ ಮಮ್ತಾಜ್ ಬೇಗಂ ಹಮೀದ ಕಾತುನ್, ಶೈನಾಜ್ ಬೇಗಂ, ಪಾಲಕರಾದ ಮುನೀರ್, ಶ್ರೀನಿವಾಸ, ಯರ‌್ರಿಸ್ವಾಮಿ ಇದ್ದರು.
Published on

ಹಗರಿಬೊಮ್ಮನಹಳ್ಳಿ:ಮನೆಯಲ್ಲಿ ಮಕ್ಕಳಿಗೆ ಕಲಿಕಾ ವಾತಾವರಣ ನಿರ್ಮಿಸಲು ಪಾಲಕರು ಮುಂದಾಗಬೇಕು ಎಂದು ಶಿಕ್ಷಕ ರೆಡ್ಡಿ ನಾಯ್ಕ ಹೇಳಿದರು.


ತಾಲೂಕಿನ ತಂಬ್ರಹಳ್ಳಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪಾಲಕರ ಸಭೆ ಮತ್ತು ಚಟುವಟಿಕೆ ಕಾರ್ಯಾಗಾರದಲ್ಲಿ ಮಾತನಾಡಿದರು.


ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಮೂಲಕ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು. ಮಕ್ಕಳಿಗೆ ವಿದ್ಯೆಯ ಜತೆಗೆ ಉತ್ತಮ ಸಂಸ್ಕಾರ, ಉದಾತ್ತ ಮೌಲ್ಯಗಳ ಅರಿವು ಮೂಡಿಸಬೇಕು. ಸೆ.29 ರಂದು ಜಿಲ್ಲಾಮಟ್ಟದ ಶೈಕ್ಷಣಿಕ ಇಂಗ್ಲಿಷ್ ಮೇಳ ಹಮ್ಮಿಕೊಳ್ಳುವ ಚಿಂತನೆ ನಡೆಸಿದ್ದೇವೆ ಎಂದರು.

ಇದನ್ನೂ ಓದಿ: ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಿ
ಕಾರ್ಯಾಗಾರದಲ್ಲಿ ಪಾಲಕರಿಂದ ಹಲವು ಚಟುವಟಿಕೆ ಮಾಡಿಸಲಾಯಿತು. ಎಸ್ಡಿಎಂಸಿ ಸದಸ್ಯರಾದ ರಾಜಾಸಾಬ್, ರೇಷ್ಮಾ, ಗಂಗಮ್ಮ, ಶಮಿನ ಬಾನು, ಜಮೀರ್ ಭಾಷಾ, ಪಾಲಕರದ ಪರಸಪ್ಪ, ಯರ‌್ರಿಸ್ವಾಮಿ, ಮುನೀರ್, ದೊಡ್ಡಬಸಪ್ಪ, ಶಿಕ್ಷಕರಾದ ಮಮ್ತಾಜ್ ಬೇಗಂ ಹಮೀದ ಕಾತುನ್, ಶೈನಾಜ್ ಬೇಗಂ, ರವಿಕುಮಾರ ಸಕ್ರಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net