

ಯಲ್ಲಾಪುರ: ನಮ್ಮ ಹಿಂದಿನ ಹಿರಿಯರು ನಡೆಸಿಕೊಂಡು ಬಂದ ಕಲಾ ಸೇವೆಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಹೊಣೆ ನಮ್ಮದು ಎಂದು ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.
ತಾಲೂಕಿನ ನಂದೊಳ್ಳಿಯಲ್ಲಿ ಶ್ರೀ ರಾಮಲಿಂಗೇಶ್ವರ ನಾಟಕ ಕಲಾ ಬಳಗದ 11ನೇ ವರ್ಷದ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ವೈದಿಕ ತಿಮ್ಮಣ್ಣ ಭಟ್ಟ ಜಾತಗೇರಿಪಾಲ, ನಾಟಕ ಕಲಾವಿದ ದತ್ತಾತ್ರೇಯ ಹೆಗಡೆ ಕಣ್ಣಿಜಡ್ಡಿ, ಹಿರಿಯ ಯಕ್ಷಗಾನ ಕಲಾವಿದ ಗಣಪತಿ ಭಟ್ಟ ಹುಲಿಮನೆ, ಜಾನಪದ ಕಲಾವಿದ ನಾರಾಯಣ ಸಿದ್ದಿ ಅವರನ್ನು ಸನ್ಮಾನಿಸಲಾಯಿತು. ಯುವ ಉದ್ಯಮಿ ಈಶ್ವರ ನಾಯ್ಕ ಅವರನ್ನು ಪುರಸ್ಕರಿಸಲಾಯಿತು.
ಕಲಾ ಬಳಗದ ಗೌರವಾಧ್ಯಕ್ಷ ಟಿ.ಆರ್. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷೆ ಭವಾನಿ ಸಿದ್ದಿ, ಉಪಾಧ್ಯಕ್ಷೆ ನಾಗರತ್ನಾ ನಾಯ್ಕ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ಟ, ನಂದೊಳ್ಳಿ ಸಹಕಾರಿ ಸಂಘದ ಅಧ್ಯಕ್ಷ ಟಿ.ವಿ.ಭಾಗ್ವತ, ಟಿಎಂಎಸ್ ನಿರ್ದೇಶಕ ವೆಂಕಟರಮಣ ಭಟ್ಟ ಕಿರಕುಂಭತ್ತಿ, ಸಾಮಾಜಿಕ ಕಾರ್ಯಕರ್ತ ಶಿವಲಿಂಗಯ್ಯ ಅಲ್ಲಯ್ಯನವರಮಠ, ಎಸ್‌ಡಿಎಂಸಿ ಅಧ್ಯಕ್ಷ ಚಿನ್ಮಯ ಬೆಳ್ಳಿ, ಎಲ್ಎಸ್‌ಎಂಪಿ ಸೊಸೈಟಿ ನಿರ್ದೇಶಕ ಎಂ.ಎನ್. ಭಟ್ಟ, ಕಲಾ ಬಳಗದ ಅಧ್ಯಕ್ಷ ನಾಗರಾಜ ಕವಡಿಕೆರೆ, ಪದಾಧಿಕಾರಿಗಳಾದ ಶಿವಾನಂದ ನಾಯ್ಕ, ಮಂಜುನಾಥ ನಾಯ್ಕ, ಸುಬ್ಬಣ್ಣ ಕಂಚಗಲ್, ಮಾದೇವ ನಾಯ್ಕ, ತಿಮ್ಮಣ್ಣ ಸೂಳಗಾರ ಇತರರಿದ್ದರು.
ನಂತರ ಬಳಗದ ಕಲಾವಿದರಿಂದ ಪ್ರದರ್ಶನಗೊಂಡ ದೇವರು ಕೊಟ್ಟ ತಂಗಿ ನಾಟಕ ಪ್ರೇಕ್ಷಕರನ್ನು ರಂಜಿಸಿತು.