ಪದವಿ ಜತೆಗೆ ಕೌಶಲ ಶಿಕ್ಷಣ ಕಡ್ಡಾಯವಾಗಿ ಕಲಿಯಬೇಕು: ಡಾ. ಎಸ್. ವಿದ್ಯಾಶಂಕರ್|Skills Education

b (9)
Published on

ಕೆಂಗೇರಿ: ವಿದ್ಯಾರ್ಥಿಗಳು ಕೇವಲ ಎಂಜಿನಿಯರಿಂಗ್ ಸೇರಿ ಪದವಿ ಪಡೆದರೆ, ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ಬದಲಾಗಿ ಇದರೊಂದಿಗೆ ಅಗತ್ಯ ಕೌಶಲ ಶಿಕ್ಷಣವನ್ನು ಕಡ್ಡಾಯವಾಗಿ ಕಲಿತುಕೊಳ್ಳಬೇಕು(It is mandatory to study skills education along with a degree) ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕುಲಪತಿ ಡಾ. ಎಸ್. ವಿದ್ಯಾಶಂಕರ್(Dr. S. Vidyashankar)  ಹೇಳಿದರು.

ಎಸ್‌ಜೆಬಿ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿ ಆಯೋಜಿಸಿದ್ದ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸುವುದಕ್ಕಾಗಿ ಈ ರೀತಿಯ ಕಾರ್ಯಕ್ರಮಗಳು ಅನುಕೂಲವಾಗಲಿದೆ. ಇಂಜಿನಿಯರ್ ಕೋರ್ಸ್‌ಗೆ ಸೇರಿದರೆ ಮಾತ್ರ ನೀವು ಇಂಜಿನಿಯರ್ ಆಗುವುದಿಲ್ಲ. ಇದರ ಜತೆಗೆ ಕೌಶಲ ಶಿಕ್ಷಣವನ್ನು ಪಡೆಯಬೇಕು. ಇದಕ್ಕಾಗಿ ನಾವು ಸಾಕಷ್ಟು ಕೌಶಲ ಕೋರ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುತ್ತಿದ್ದೇವೆ. ಖಾಸಗಿ ಕಂಪನಿಗಳು ಉದ್ಯೋಗವಿಟ್ಟುಕೊಂಡು ಬರುತ್ತಿವೆ. ಆದರೆ, ಸಮರ್ಥ ವಿದ್ಯಾರ್ಥಿಗಳು ಸಿಗುತ್ತಿಲ್ಲ. ಇದಕ್ಕೆ ಕಾರಣ, ಕೌಶಲದ ಕೊರತೆ. ಇದಕ್ಕಾಗಿ ಕೌಶಲ ಸಾಮರ್ಥ್ಯವನ್ನು ಪರಿಶೀಲಿಸುವ ತಂತ್ರಜ್ಞಾನವನ್ನು ನಾವು ರೂಪಿಸಿದ್ದೇವೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಟಾಟಾ ಎಲಾಕ್ಸಿ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿಯ ನವೀನ್ ಮಂಜುನಾಥ್, ಶ್ರೀ ಧನಂಜಯ ಗುರೂಜಿ , ಎಥ್ನೋಟೆಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ಡಾ. ಕಿರಣ್ ರಾಜಣ್ಣ, ಕಾಲೇಜಿನ ಪ್ರಾಂಶುಪಾಲ ಡಾ.ಕೆ.ವಿ.ಮಹೇಂದ್ರ ಪ್ರಶಾಂತ್, ಶೈಕ್ಷಣಿಕ ನಿರ್ದೇಶಕ ಡಾ. ಪುಟ್ಟರಾಜು ಇತರರು ಇದ್ದರು.

*ಪ್ರತಿಯೊಬ್ಬರು ಹಣದ ಹಿಂದೆ ಓಡುತ್ತಿರುವುದು ದುರಂತ. ಎಸ್‌ಜೆಬಿ ಕಾಲೇಜಿನಲ್ಲಿ 1.50 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಾಲಗಂಗಾಧರನಾಥ ಸ್ವಾಮೀಜಿಗಳು ಈ ವಿದ್ಯಾರ್ಥಿಗಳ ಸಂಖ್ಯೆ ನೋಡಿದರೆ ಸಾಕಷ್ಟು ಖುಷಿ ಪಡುತ್ತಿದ್ದರು. ಅವರ ಕನಸನ್ನು ನಾವು ನನಸು ಮಾಡುತ್ತಿದ್ದೇವೆ. ಅದೇ ರೀತಿ ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣ ಮಾತ್ರವಲ್ಲ, ಜತೆಗೆ ಸಂಸ್ಕೃತಿಯನ್ನು ಸಹ ಕಲಿಸುತ್ತಿದ್ದೇವೆ.

-ಡಾ. ಪ್ರಕಾಶನಾಥ ಸ್ವಾಮೀಜಿ , ವ್ಯವಸ್ಥಾಪಕ ನಿರ್ದೆಶಕರು, ಬಿಜಿಎಸ್ ಮತ್ತು ಎಸ್‌ಜೆಬಿ ಸಮೂಹ ಸಂಸ್ಥೆಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net