

ರಾಯಚೂರು ಲೋಕಸಭಾ ಸದಸ್ಯ ವಿವೇಚನಾ ನಿಽಗೆ ೦೫ ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು , ಆದರೆ ಸಂಸದ ಜಿ.ಕುಮಾರನಾಯಕ ಅನುದಾನವೇ ಬಳಸಿಕೊಳ್ಳದೆ ಇರುವುದು ಶೋಚನೀಯ ಸಂಘತಿಯಲ್ಲಿದೆ ಎಂದು ಹೈದ್ರಾಬಾದ ಕರ್ನಾಟಕ ಜನಾಂದೋಲನ ಕೇಂದ್ರ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೨೦೨೪-೨೫ ಸಾಲಿಗೆ ೫ ಕೋಟಿ ರೂ
ಅನುದಾನ ಬಿಡುಗಡೆಯಾಗಿದ್ದು, ನಯಾಪೈಸೆಯೂ ಬಳಕೆಯಾಗಿಲ್ಲ. ಐಎಎಸ್ ಅಽಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ, ಸಂಸತ್‌ನಲ್ಲಿ ಸಮರ್ಥವಾಗಿ ಚರ್ಚೆಯಲ್ಲಿ ಭಾಗವಹಿಸುತ್ತಿರುವದು ಅಭಿನಂದನಾರ್ಹ.
ಆದರೆ ಹಿಂದುಳಿದ ಪ್ರದೇಶಕ್ಕೆ ಬಿಡುಗಡೆಯಾಗುವ ಅನುದಾನ ಬಳಕೆ ಮಾಡದೇ ಇರುವದು ಅನುದಾನವೇ ಮರಳಿ ಹೋಗದಂತೆ ಎಚ್ಚರವಹಿಸಬೇಕು. ಇಲ್ಲದೇ ಹೋದರೆ ಹಳೆ ಕಲ್ಲು, ಹೊಸ ಬಿಲ್ ಆಗುವ ಆತಂಕವೂ ಇಲ್ಲದೇ ಇಲ್ಲ. ಅನುದಾನ ದುರ್ಬಳಕೆಯಾಗದಂತೆ ಎಚ್ಚರವಹಿಸುವ ಜತೆಗೆ ಅನುದಾನ ಬಳಕೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಜಾನವೆಸ್ಲಿ, ಶೆಟ್ಟಿ ಈರಣ್ಣ ಭಂಡಾರಿ ಇದ್ದರು.