ಪೌರ ಕಾರ್ವಿುಕರಿಲ್ಲದ ವ್ಯವಸ್ಥೆ ಊಹಿಸಿಕೊಳ್ಳಲು ಅಸಾಧ್ಯ

New paur Karmika
Published on

ಹುಬ್ಬಳ್ಳಿ : ಪೌರ ಕಾರ್ವಿುಕರಿಲ್ಲದ ನಗರ, ಪಟ್ಟಣಗಳ ವ್ಯವಸ್ಥೆ ಊಹಿಸಿಕೊಳ್ಳುವುದು ಅಸಾಧ್ಯ. ನಗರ ಸ್ವಚ್ಛತೆಯಲ್ಲಿ ಪೌರಕಾರ್ವಿುಕರ ಸೇವೆ ಅನನ್ಯವಾದದು ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.

ಇಲ್ಲಿನ ಅಶೋಕ ನಗರದ ಡಾ. ಡಿ.ಎಸ್. ರ್ಕ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಪೌರ ಕಾರ್ವಿುಕರ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಗರ ಸ್ವಚ್ಛತೆಯಲ್ಲಿ ತಮ್ಮದೇ ಕೊಡುಗೆ ನೀಡುತ್ತಿರುವ ಪೌರ ಕಾರ್ವಿುಕರಿಗೆ ದೊರೆಯಬೇಕಾದ ಅಗತ್ಯ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಹಾಪೌರ ರಾಮಪ್ಪ ಬಡಿಬೇರ ಮಾತನಾಡಿ, ಬಿಸಲು, ಮಳೆ, ಚಳಿ ಏನೇ ಇದ್ದರೂ ಅದಾವುದನ್ನೂ ಲೆಕ್ಕಿಸದೇ ಪೌರ ಕಾರ್ವಿುಕರು ಕರ್ತವ್ಯ ನಿರ್ವಹಿಸುತ್ತಾರೆ. ಪೌರ ಕಾರ್ವಿುಕರು ಅವಳಿ ನಗರದ ಆಧಾರ ಸ್ತಂಭ ಇದ್ದಂತೆ ಎಂದು ಬಣ್ಣಿಸಿದರು.

ಸೇವೆಯಿಂದ ನಿವೃತ್ತರಾದ 37 ಪೌರಕಾರ್ವಿುಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪಾಲಿಕೆಯ ವಲಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಬಹಿಷ್ಕರಿಸಿ ಪ್ರತಿಭಟನೆ : ಕಾರ್ಯಕ್ರಮ ಬಹಿಷ್ಕರಿಸಿದ ಕೆಲ ಪೌರ ಕಾರ್ವಿುಕರು, ಧಾರವಾಡ ಜಿಲ್ಲಾ ಎಸ್ಸಿಎಸ್ಟಿ ಪೌರಕಾರ್ವಿುಕರ ಮತ್ತು ನೌಕರರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ನೇತೃತ್ವದಲ್ಲಿ ಕೈಗೆ ಕಪು್ಪಪಟ್ಟಿ ಕಟ್ಟಿಕೊಂಡು ಡಾ. ಡಿ.ಎಸ್. ರ್ಕ ಸಭಾಭವನದ ಎದುರು ಪ್ರತಿಭಟನೆ ನಡೆಸಿದರು.

ಪೌರಕಾರ್ವಿುಕರ ನೇಮಕಾತಿ ಆದೇಶ ಪತ್ರ ವಿತರಣೆ ಸೇರಿದಂತೆ 18 ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ 2 ತಿಂಗಳ ಹಿಂದೆ ಧರಣಿ ನಡೆಸಲಾಗಿತ್ತು. ಇದುವರೆಗೆ ಒಂದೂ ಬೇಡಿಕೆ ಈಡೇರಿಲ್ಲ ಎಂದು ತಮ್ಮನ್ನು ಭೇಟಿಯಾದ ಮಹಾಪೌರ ರಾಮಪ್ಪ ಬಡಿಗೇರ ಹಾಗೂ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಎದುರು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

134 ಜನ ಪೌರಕಾರ್ವಿುಕರಿಗೆ ಆದೇಶ ಪತ್ರ ಕೊಡುವ ಸಂಬಂಧ ಪಾಲಿಕೆ ಆಡಳಿತ ಮತ್ತು ಪಕ್ಷದಲ್ಲಿಯೂ ತೀಮಾನ ಕೈಗೊಳ್ಳಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತು ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ದಿನಾಂಕ ಪಡೆದು ವಿತರಿಸಲಾಗುವುದು ಎಂದು ಮಹಾಪೌರರು ತಿಳಿಸಿದರು.

ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಈಗಾಗಲೇ ಮಹಾಪೌರರು ಹಾಗೂ ಸದಸ್ಯರೊಂದಿಗೆ ರ್ಚಚಿಸಲಾಗಿದೆ. ಎಲ್ಲ ಪ್ರಮುಖ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದರು. ಮಂಗಳವಾರದಂದು ಪೌರಕಾರ್ವಿುಕರೊಂದಿಗೆ ಸಭೆ ನಡೆಸಿ, ಸಮಸ್ಯೆ ಪರಿಹರಿಸುವ ಭರವಸೆಯನ್ನು ಮಹಾಪೌರರು ಹಾಗೂ ಆಯುಕ್ತರು ನೀಡಿದ ಬಳಿಕ ಪೌರಕಾರ್ವಿುಕರು ಪ್ರತಿಭಟನೆಯಿಂದ ಹಿಂದೆ ಸರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net