

ರಬಕವಿ/ಬನಹಟ್ಟಿ: ಸಹಕಾರಿ ಕ್ಷೇತ್ರದಲ್ಲಿ ಕೇವಲ ಲಾಭಕ್ಕಾಗಿ ಹಣಕಾಸು ವ್ಯವಹಾರ ನಡೆಸದೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಆರ್ಥಿಕ ಸಬಲೀಕರಣಕ್ಕಾಗಿ ಶ್ರಮಿಸುವುದೇ ಮುಖ್ಯವಾಗಿದೆ ಎಂದು ರಬಕವಿಯ ಶ್ರೀನಿಧಿ ಸಹಕಾರಿ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ನಾಶಿ ಹೇಳಿದರು.
ರಬಕವಿಯ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ಭಾನುವಾರ ನಡೆದ ಶ್ರೀನಿಧಿ ಸಹಕಾರಿ ಸೊಸೈಟಿ ಸಂಘದ ಬೆಳ್ಳಿ ಹಬ್ಬದ ಆಚರಣೆಯ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಸಹಕಾರಿ ರಂಗಗಳ ಕಾರ್ಯ ಸಮಾಜದಲ್ಲಿ ಸರ್ಕಾರದಷ್ಟೇ ಪ್ರಮುಖವಾಗಿದೆ. ನಿರಂತರ ಸೇವೆಯೊಂದಿಗೆ ಸಮಾಜವು ಆರ್ಥಿಕ ಬೆಳವಣಿಗೆಯಾದಾಗ ಮಾತ್ರ ಸಂಘದ ಅಭಿವೃದ್ಧಿ ಸಾಧ್ಯ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನಗೈದ ಸಾಧಕರನ್ನು ಸನ್ಮಾನಿಸಲಾಯಿತು. ಮಲಕಾಜಪ್ಪ ಸಾಬೋಜಿ, ವಿಜಯಕುಮಾರ ನಾಶಿ, ಅಂದಾನಿ ಮುತ್ತೂರ, ಉದಯ ಜಿಗಜಿನ್ನಿ, ಗಂಗಾಧರ ಭಿಲವಡಿ, ನೀಲಕಂಠ ಮುತ್ತೂರ, ಬಸವರಾಜ ತೆಗ್ಗಿ, ಶ್ರೀಶೈಲ ಭುಯ್ಯರ, ಸಂಗಯ್ಯ ಅಮ್ಮಣಗಿಮಠ, ರವಿ ಮುತ್ತೂರ, ಗಂಗಾ ಕಮತಗಿ, ವಿದ್ಯಾಶ್ರೀ ಹಲಗಬಾಳಿ, ಅನಿಲ ಮಹಾಜನ, ಮಲ್ಲಿಕಾರ್ಜುನ ಹುಲಗಬಾಳಿ, ಧರೆಪ್ಪ ಉಳ್ಳಾಗಡ್ಡಿ, ಸಿದ್ದಣ್ಣ ಸಣಕಾಲ, ರಾಮಣ್ಣ ಹುಲಕುಂದ, ಡಾ. ಪದ್ಮಜೀತ ನಾಡಗೌಡ ಪಾಟೀಲ, ಗಣಪತರಾವ್ ಹಜಾರೆ, ಶೇಖರ ಕೊಟ್ರಶೆಟ್ಟಿ, ರವಿ ಜಮಖಂಡಿ ಇತರರಿದ್ದರು.