

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಮನಸಿನ ಹಸಿವು ತಣಿಸಿದರೆ ಸಾಲದು. ಜ್ಞಾನದ ಹಸಿವು ನೀಗಿಸುವುದು ಮುಖ್ಯ. ಸಾಗುವಳಿ ಕಟ್ಟಿಕೊಂಡು ನಮ್ಮ ಭೂಮಿ ಬೇರೆಯವರ ಪಾಲಾದರೂ ಸಾಸುವ ಛಲದ ಬಂಟರು ನಾವಾದೆವು ಎಂದು ಸಾಹಿತಿ ದಯಾಮಣಿ ಸುಧಾಕರ ಶೆಟ್ಟಿ ಹೇಳಿದರು.
ಪಡುಬಿದ್ರಿ ಬಂಟರ ಸಂಘ, ಬಂಟ್ಸ್ ವೆಲ್‌ೇರ್ ಟ್ರಸ್ಟ್, ಬಂಟರ ಮಹಿಳಾ ವಿಭಾಗ ಪಡುಬಿದ್ರಿ ಬಂಟರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಆಟಿದ ಗೌಜಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾನಪದ ವಿದ್ವಾಂಸ ಡಾ.ವೈ.ಎನ್.ಶೆಟ್ಟಿ ಮಾತನಾಡಿ, ಆಟಿ ಆಷಾಢವಲ್ಲ. ಆಟಿ ತುಳುವರ ಆಟಿ. ಆಟಿ ಭೂಮಿಗೆ ಚೇತನವಾಗಿ ಮಳೆಯಿಂದ ಜಲ ಸಂಗ್ರಹದ ಸಮಯ. ಆಟಿ ಒಂದು ದಿನದ ಕಾರ್ಯಕ್ರಮವಲ್ಲ ಎಂದರು.
ಉಡುಪಿ ಜಿಪಂ ಮಾಜಿ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಉದ್ಘಾಟಿಸಿದರು. ಪ್ರಗತಿಪರ ಕೃಷಿಕ ಹೆಜಮಾಡಿ ಶಿವರಾಮ ಎನ್.ಶೆಟ್ಟಿ, ಯಶಸ್ವೀ ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ಪಲ್ಲವಿ, ಜಾನಪದ ವಿದ್ವಾಂಸ ಡಾ.ವೈ.ಎನ್.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಪಡುಬಿದ್ರಿ ಬಂಟರ ಸಂಘ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಅಧ್ಯಕ್ಷತೆ ವಹಿಸಿದ್ದರು. ಬಂಟರ ಸಂಘದ ಸಿರಿಮುಡಿ ದತ್ತಿನಿಧಿ ಸ್ಥಾಪಕ ಸಾಂತೂರು ಭಾಸ್ಕರ ಶೆಟ್ಟಿ, ಬಂಟರ ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಯುವ ಬಂಟರ ಸಂಘ ಅಧ್ಯಕ್ಷ ಸುಜಿತ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದರ್ಶಿ ಸುಶ್ಮಿತಾ ಎಂ.ಶೆಟ್ಟಿ, ಕೋಶಾಧಿಕಾರಿ ಲತಾ ಪಿ.ಶೆಟ್ಟಿ ಉಪಸ್ಥಿತರಿದ್ದರು. ಯಶೋಧರ ಎರ್ಮಾಳು ನೇತೃತ್ವದ ಅಬ್ಬರ ತಂಡದಿಂದ ಆಟಿ ಕಳೆಂಜ, ಕಂಗೀಲು ಸಹಿತ ಜಾನಪದ ನೃತ್ಯ ಸಿಂಚನ ನಡೆಯಿತು. ಬಂಟರ ಸಂಘದ ಮಹಿಳಾ ವಿಭಾಗ ಅಧ್ಯಕ್ಷೆ ಭಾರತಿ ಭಾಸ್ಕರ ಶೆಟ್ಟಿ ಸ್ವಾಗತಿಸಿದರು. ನಿಶಾ ಶೆಟ್ಟಿ, ಅನುಷಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸುಶ್ಮಿತಾ ಶೆಟ್ಟಿ ವಂದಿಸಿದರು.