ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ

h16-rajata mahotsava
Published on

ಹುಬ್ಬಳ್ಳಿ: ಕಲ್ಯಾಣಿ ಮಹಿಳಾ ಮಂಡಳದ ರಜತ ಮಹೋತ್ಸವ ಅಂಗವಾಗಿ ಇಲ್ಲಿನ ಕಲ್ಯಾಣ ನಗರದ ರಂಗಮಂದಿರದಲ್ಲಿ 1 ರಿಂದ 10ನೇ ತರಗತಿ ಮಕ್ಕಳಿಗೆ ಅಡುಗೆ, ವೇಷಭೂಷಣ ಸ್ಪರ್ಧೆ ಮತ್ತು ಪಿಕ್ ಆಂಡ್ ಸ್ಪೀಕ್ ಸ್ಪರ್ಧೆಯನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.

ತೀರ್ಪಗಾರ ಎಸ್.ಜಿ. ಕುರಡಗಿ ಮಾತನಾಡಿ, ಮಕ್ಕಳು ಉತ್ತಮ ಪ್ರತಿಭಾ ಪ್ರದರ್ಶನ ನೀಡಿದ್ದಾರೆ. ಸೋಲು-ಗೆಲುವು ಮುಖ್ಯವಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ ಎಂದರು.

1ರಿಂದ 4 ನೇ ತರಗತಿ ಮಕ್ಕಳು, ದೇವದೇವಿಯರ, ದೇಶ ಭಕ್ತರ, ಸಂತರ, ಶರಣರ, ರಾಜ, ರಾಣಿಯರ ವೇಷಭೂಷಣ ಧರಿಸಿ ಗಮನ ಸೆಳೆದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎಲ್ಲ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ಸ್ಪರ್ಧೆಯಲ್ಲಿ ಒಟ್ಟು 62 ಮಕ್ಕಳು ಭಾಗವಹಿಸಿದ್ದರು. ಪಿಎಚ್.ಡಿ ಪಡೆದ ತಬಲಾ ವಾದಕ ಡಾ. ನಾಗಲಿಂಗ ಮುರಗಿ ಅವರನ್ನು ಸನ್ಮಾನಿಸಲಾಯಿತು.

ವಿಜಯಲಕ್ಷ್ಮೀ ಕೊಪ್ಪದ, ರಾಧಾ ಕುಲಕರ್ಣಿ, ಪ್ರೊ. ವಿದ್ಯಾವತಿ ಕಿಣಗಿ, ಡಾ. ಲಕ್ಷ್ಮೀ ಯಾವಗಲ್, ಪ್ರಾಚಿ ಲಲಗೆ ವಿವಿಧ ಸ್ಪರ್ಧೆಗಳ ನಿರ್ಣಾಯಕರಾಗಿ ಭಾಗವಹಿಸಿದ್ದರು.

ಮಹೋತ್ಸವದ ಅಧ್ಯಕ್ಷೆ ಡಾ. ಲೀಲಾ ಹಿರೇಮಠ, ಕಲ್ಯಾಣಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಪ್ರೀತಾ ಛಬ್ಬಿ, ದಾಕ್ಷಾಯಣಿ ಕೋಳಿವಾಡ, ಲಲಿತಾ ಹೊಸಕೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net