

ಹುಬ್ಬಳ್ಳಿ: ಇಲ್ಲಿಯ ಉಣಕಲ್‌ನ ಶ್ರೀನಗರದ ಚೇತನ ಬಿಜಿನೆಸ್ ಸ್ಕೂಲ್‌ನಲ್ಲಿ ಭಾನುವಾರ ಅಂತರ ಕಾಲೇಜ್ ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ಥ್ರೋ ಬಾಲ್ ಪಂದ್ಯಾವಳಿ (ಸಮರ -2025) ಏರ್ಪಡಿಸಲಾಗಿತ್ತು.
ಪಂದ್ಯಾವಳಿ ಉದ್ಘಾಠಿಸಿ ಮಾತನಾಡಿದ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ, ಸೋಲು-ಗೆಲುವು ಮುಖ್ಯವಲ್ಲ, ಕ್ರೀಡಾಕೂಟದಲ್ಲಿ ಭಾಗವಹಿಸುವುದು ಮುಖ್ಯ. ಕಾಲೇಜ್ ದಿನಗಳಲ್ಲಿ ನಾನು ಕರ್ನಾಟಕ ವಿಶ್ವವಿದ್ಯಾಲಯದ ಬ್ಲೂ ಆಗಿದ್ದೆ ತಮ್ಮ ಕಾಲೇಜ್ ದಿನಗಳನ್ನು ಮೆಲಕು ಹಾಕಿದರು.
ಕುಮಟಾ, ಯಲ್ಲಾಪುರ, ಗದಗ, ಹುಬ್ಬಳ್ಳಿ-ಧಾರವಾಡ ಸೇರಿ ವಿವಿಧ ಕಾಲೇಜ್‌ಗಳ 29 ತಂಡಗಳು ಭಾಗವಹಿಸಿದ್ದವು. ಪುರುಷರ ತಂಡದಲ್ಲಿ ಕುಮಟಾದ ಬಾಳಿಗ ಕಾಲೇಜ್ ಮೊದಲ ಬಹುಮಾನ 10 ಸಾವಿರ ರೂ. ನಗದು ಮತ್ತು ಟ್ರೋಫಿ, ಧಾರವಾಡದ ಬಿಪಿಡ್ ಕಾಲೇಜ್ ಎರಡನೇ ಸ್ಥಾನ ಪಡೆದು 6 ಸಾವಿರ ರೂ. ನಗದು ಹಾಗೂ ಟ್ರೋಫಿ ಪಡೆಯಿತು. ಜೆ.ಜಿ. ಕಾಲೇಜ್ ಆಫ್ ಕಾಮರ್ಸ್ (ಮಹಿಳೆಯರ ತಂಡ) ಮೊದಲನೇ ಬಹುಮಾನ 6 ಸಾವಿರ ರೂ. ನಗದು ಪಡೆಯಿತು.
ನಿರ್ದೇಶಕ ಡಾ. ವಿಶ್ವನಾಥ ಕೊರವಿ, ಡಾ.ಎ. ಆರ್. ವಡಕಣ್ಣವರ, ಡಾ.ಕೆ.ಸಿ. ಪಾಂಗಿ, ಡಾ. ರಮಾಕಾಂತ ಕುಲಕರ್ಣಿ, ಡಾ. ಅನಿರುದ್ಧ ಅಂಕೋಲೆಕರ, ಡಾ. ಅನಿಲ ಯರಗಟ್ಟಿ, ಡಾ. ಮಂಗಳಾ ಯರಗಟ್ಟಿ, ಪ್ರೊ. ಶ್ರೇಯಸ್ ಮುರ್ಡೇಶ್ವರ, ಪ್ರೊ. ಶ್ವೇತಾ ಸಜ್ಜನರ ಇತರರು ಇದ್ದರು.