ಕ್ರೀಡೆಯಲ್ಲಿ ಪಾಳ್ಗೊಳ್ಳುವುದು ಮುಖ್ಯ

RON
Published on

ರೋಣ: ಚದುರಂಗವು ವಿಶ್ವದ ಅತ್ಯಂತ ಜನಪ್ರಿಯ ಆಟಗಳಲ್ಲಿ ಒಂದಾಗಿದೆ. ಇದು 19ನೇ ಶತಮಾನದಲ್ಲಿ ಬೆಳಕಿಗೆ ಬಂದರೂ ಜನರಿಗೆ ತಿಳಿದಿದ್ದು ತಡವಾಗಿಯೇ. ಆದರೆ, ಇಂದು ವಿಶ್ವಾದ್ಯಂತ ಲಕ್ಷಾಂತರ ಆಟಗಾರರು ಚೆಸ್ ಆಡುತ್ತಾರೆ ಎಂದು ಶ್ರೀ ಶರಣರ ಶಿಕ್ಷಣ ಸಮಿತಿ ಅಧ್ಯಕ್ಷ ಡಾ. ಎಸ್.ಬಿ. ಲಕ್ಕೋಳ ಹೇಳಿದರು.

ಪಟ್ಟಣದ ನ್ಯೂ ಲಿಟಲ್ ಫ್ಲವರ್ ಆಂಗ್ಲ ಮಾಧ್ಯಮ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ರೋಣ ಹಾಗೂ ಗಜೇಂದ್ರಗಡ ತಾಲೂಕು ಮಟ್ಟದ ಚೆಸ್ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ‘ಸ್ಪರ್ಧೆಯಲ್ಲಿ ಸೋಲು- ಗೆಲುವು ಮುಖ್ಯವಲ್ಲ. ಕ್ರೀಡಾಕೂಟದಲ್ಲಿ ಭಾಗವಹಿಸುವುದು ಮುಖ್ಯ. ವಿದ್ಯಾರ್ಥಿಗಳು ಅದನ್ನು ಅರಿತು ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು’ ಎಂದರು.

ಸಂಸ್ಥೆ ನಿರ್ದೇಶಕ ಮಂಡಳಿ ಸದಸ್ಯರಾದ ಟಿ.ಬಿ. ನವಲಗುಂದ, ಆರ್.ಎ. ಗಿರಡ್ಡಿ, ಬಿ.ಸಿ. ಸುಂಕದ, ಎ.ಜಿ. ಸಂಗಳದ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಆರ್.ಎಸ್. ನರೇಗಲ್ಲ, ಸಂಸ್ಥೆಯ ಆಡಳಿತಾಧಿಕಾರಿ ಬಿ.ಎಸ್. ಬಳಗಾನೂರ, ಶಾಲೆಯ ಮುಖ್ಯ ಗುರು ಎಸ್.ಪಿ. ಬಳಿಗಾರ, ದೈಹಿಕ ಶಿಕ್ಷಕ ಕೆ.ಎಸ್. ನಾಯ್ಕರ್, ಪಿಯು ಕಾಲೇಜ್ ಪ್ರಾಚಾರ್ಯ ಜೆ.ಬಿ. ಕಲ್ಲನಗೌಡ್ರ, ಪ್ಯಾರಾ ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಪ್ರಮೋದ ಚರಂತಿಮಠ, ಎನ್.ಆರ್. ಜಿಗಳೂರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net