ಪೌರಕಾರ್ಮಿಕರನ್ನು ಗೌರವಿಸುವುದು ಎಲ್ಲರ ಕರ್ತವ್ಯ, ಶಾಸಕ ನಿಸರ್ಗ ನಾರಾಯಣಸ್ವಾಮಿ ಅಭಿಮತ, ದೇವನಹಳ್ಳಿ ಪುರಸಭೆಯಲ್ಲಿ ಆಯುಧಪೂಜೆ ಸಂಭ್ರಮ

N.10 dhl K.S.S.D news- ph-4
Published on

ದೇವನಹಳ್ಳಿ: ಪಟ್ಟಣ ಸ್ವಚ್ಛಮಾಡಲು ಪ್ರತಿದಿನ ಪೌರಕಾರ್ಮಿಕರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅಂತಹ ಪೌರಕಾರ್ಮಿಕರು ಹಾಗೂ ಕರೊನಾ ಸೇನಾನಿಗಳನ್ನು ಸನ್ಮಾನಿಸುವುದು ಎಲ್ಲ ಕರ್ತವ್ಯ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.

ಪಟ್ಟಣದ ಪುರಸಭಾ ಆವರಣದಲ್ಲಿ ಪುರಸಭಾ ಆಡಳಿತ ಏರ್ಪಡಿಸಿದ್ದ ಆಯುಧ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒಂದೂವರೆ ವರ್ಷದ ಬಳಿಕ ನೂತನವಾಗಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಅಧಿಕಾರ ದೊರೆತ್ತಿದ್ದು, ಸದಸ್ಯರ ಜತೆ ಚರ್ಚಿಸಿ ಯೋಜನೆ ರೂಪಿಸಿ ಮಾದರಿ ಪಟ್ಟಣ ಮಾಡಲು ಪ್ರಯತ್ನಿಸಬೇಕು. ಎಲ್ಲ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ಹಿಂದುಳಿದ ವರ್ಗಗಳ ಕಾಂಗ್ರೆಸ್ ಉಪಾಧ್ಯಕ್ಷ ಸಿ. ಜಗನ್ನಾಥ್ ಮಾತನಾಡಿ, ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳು ಪಟ್ಟಣದ ಅಭಿವೃದ್ಧಿಗೆ ಪಕ್ಷಭೇದ ಮರೆತು ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನಿಸಬೇಕು ಎಂದರು.

ನೂತನ ಅಧ್ಯಕ್ಷೆ ರೇಖಾ ಮಾತನಾಡಿ, ಎಲ್ಲ ಸದಸ್ಯರ ಜತೆ ಸಮಾಲೋಚನೆ ನಡೆಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಪ್ರತಿಯೊಂದು ವಾರ್ಡ್‌ಗೂ ಮಹತ್ವ ನೀಡಿ ಕೆಲಸ ಮಾಡುತ್ತೇನೆ. ಅದೇ ರೀತಿ ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡಿಕೊಡಬೇಕು ಎಂದರು.

ಪುರಸಭಾ ಸದಸ್ಯರಾದ ಎವಿ. ಕೋಮಲಾ, ಕೆ. ಗೀತಾ, ಲೀಲಾವತಿ, ಎಂ. ಸೋಮಶೇಖರ್‌ಬಾಬು, ವೇಣುಗೋಪಾಲ್, ನಾರಾಯಣಸ್ವಾಮಿ (ಬಾಂಬೆ), ಡಿ.ಆರ್. ಬಾಲರಾಜು, ಎನ್.ಕೆ. ಮಂಜುನಾಥ್, ಎಸ್.ಸಿ. ಚಂದ್ರಪ್ಪ, ಎಸ್. ಸುಮಿತ್ರ್ರಾ, ಡಿ. ಗೋಪಮ್ಮ, ಎನ್. ರಘು, ಮಂಜುಳಾ, ಜಿ. ಸುರೇಶ್, ಜಿ.ಎ. ರವೀಂದ್ರ, ವಿ. ಚೈತ್ರಾ, ಡಿ.ಎಂ. ಮುನಿಕೃಷ್ಣ, ಲಕ್ಷ್ಮೀ ಅಂಬರೀಶ್, ರತ್ನಮ್ಮರವಿಕುಮಾರ್, ಎಸ್. ನಾಗೇಶ್ ಮಾಜಿ ಅಧ್ಯಕ್ಷ ಎಂ. ಮೂರ್ತಿ, ಮುಖಂಡರಾದ ಲಕ್ಷ್ಮೀನಾರಾಯಣ್, ಎಂ. ನಾರಾಯಣಸ್ವಾಮಿ, ಸೊಸೈಟಿ ಕುಮಾರ್, ಗಾರೆ ರವಿಕುಮಾರ್, ವಿಜಯ್‌ಕುಮಾರ್, ಇಂಜಿನಿಯರ್ ಗಜೇಂದ್ರ, ಕಿರಿಯ ಆರೋಗ್ಯ ನಿರೀಕ್ಷಕಿ ತೃಪ್ತಿ, ಲೆಕ್ಕ ಪರಿಶೋಧಕ ವಿಜಯ್‌ಕುಮಾರ್, ಗೋವಿಂದರಾಜ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net