

ಇಂಡಿ: ನಿಸರ್ಗ ನೀಡಿರುವ ನೀರನ್ನು ನಾವು ಸದುಪಯೋಗ ಮಾಡಬೇಕೇ ಹೊರತು, ದುರುಪಯೋಗ ಮಾಡಬಾರದು. ನೀರಿಲ್ಲದೆ ಆರೋಗ್ಯವಿಲ್ಲ. ಜೀವ ವ್ಯವಸ್ಥೆ ನಿಂತಿರುವುದೇ ನೀರಿನ ಮೇಲೆ ಎಂದು ಶಿಕ ದಶರಥ ಕೋರಿ ಹೇಳಿದರು.
ಪಟ್ಟಣದ ಗಾಂಧಿ ಬಜಾರ್ದಲ್ಲಿನ ಕೆಜಿಎಸ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಲಧೂತ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಲ ಸಂರಣೆ ನಮ್ಮ ಜವಾಬ್ದಾರಿಯಾಗಿದೆ. ಈಗಾಗಲೇ ತಳ ಮಟ್ಟಕ್ಕೆ ಇಳಿದಿರುವ ಅಂತರ್ಜಲ ಮಟ್ಟವನ್ನು ಏರಿಸುವ ಅನಿವಾರ್ಯ ಇದೆ.
ಮರ ಗಿಡಗಳ ನಾಶ ಆಗುವುದನ್ನು ತಡೆದು ಭೂಮಿಯ ಮೇಲಿನ ನೀರು ಬತ್ತಿ ಹೋಗುತ್ತಿರುವುದನ್ನು ತಪ್ಪಿಸುವುದು ಅವಶ್ಯವಾಗಿದೆ ಎಂದರು.
ಮುಖ್ಯಗುರು ಯು.ಎಚ್. ಚವ್ಹಾಣ ಮಾತನಾಡಿ, ದಣ ಆಫ್ರಿಕಾದ ಬೃಹತ್ ಪಟ್ಟಣ ಕೇಪ್ಟೌನ್ ಇತ್ತೀಚೆಗೆ ಅರಶ@ ಹನಿ ನೀರಿಲ್ಲದೆ ನಲುಗಿ ಹೋಯಿತು.
ನ ತಮ್ಮ ಆಸ್ತಿ ಅಂತಸ್ತು ಣ ಮಾತ್ರದಲ್ಲಿ ಬಿಟ್ಟು ಹೋದರು. ಕೇಪಟೌನ್ ನಗರ ಪ್ರಪಂಚದ ನೀರಿಲ್ಲದ ಪಟ್ಟಣವೆಂದು ಪೋಷಿತವಾಗಿ ಇತಿಹಾಸ ಸೇರಿತು.
ರತದಲ್ಲಿ ಕೂಡ ಸಹಸ್ರಾರು ಸಂಖ್ಯೆಯಲ್ಲಿ ಹಳ್ಳಗಳು ಕಣ್ಮರೆಯಾಗಿವೆ. ಕೆರೆಗಳು ಬತ್ತಿ ಹೋಗಿವೆ. ಬಾವಿಗಳು ಜೀವಜಲವಿಲ್ಲದೆ ಬೀಕೋ ಎನ್ನುತ್ತಿವೆ.
ವಿಷ್ಯದಲ್ಲಿ ನಾವು ಮುಂದಿನ ಪೀಳಿಗೆಗಾಗಿ ಜಗತ್ತಿನ ಜೀವನಾಡಿ ನೀರನ್ನು ಸಂರಸಬೇಕಾಗಿದೆ. ಆದರೆ ಸಸ್ಯ ಸಂಪತ್ತು, ಜಲ ಸಂಪತ್ತು, ಜೀವ ಸಂಪತ್ತು ಉಳಿಸಿಕೊಂಡು ಹೋಗಬೇಕಾಗಿದೆ.
ನಾವು ನೀವು ಎಲ್ಲರೂ ಇಂಗು ಗುಂಡಿ ನಿರ್ಮಾಣ ಮಾಡುವ ಜತೆಗೆ ನೀರನ್ನು ಮಿತವಾಗಿ ಬಳಸಬೇಕು ಎಂದರು. ಅಶೋಕ ಹೊಸಮನಿ, ಎಂ.ಎ. ಲಕ್ಕಡಹಾರ, ಬಿ.ಸಿ. ಭಗವಂತಗೌಡರ, ಕೆ.ಎಲ್. ಲಚ್ಯಾಣ, ಎಂ.ಬಿ. ಭಾಸಗಿ, ಎಂ.ಡಿ. ದೊಡ್ಡಮನಿ ಇತರರಿದ್ದರು.