ಜಿಪಂ, ತಾಪಂ ಚುನಾವಣೆ ನಡೆಸುವುದು ಅನುಮಾನ

ckm ccc
ಚಿಕ್ಕಮಗಳೂರು ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಬಿಎಲ್‌ಎಗಳ ಸಭೆಯಲ್ಲಿ ಎಚ್.ಸಿ.ಕಲ್ಮರುಡಪ್ಪ, ಕೋಟೆ ರಂಗನಾಥ್, ಈಶ್ವರಳ್ಳಿ ಮಹೇಶ್, ವಿಜಯಕುಮಾರ್, ಸುಧೀರ್, ಅವಿನಾಶ್ ಇತರರಿದ್ದರು.
Published on

ಚಿಕ್ಕಮಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಿನಲ್ಲಿ ಪಕ್ಷದ ಶಾಸಕರ ನಡುವಿನ ಸಂಬಂಧ ಹಳಸಿದೆ. ಹೀಗಿರುವಾಗ ರಾಜ್ಯ ಸರ್ಕಾರ ಜಿಪಂ ಹಾಗೂ ತಾಪಂ ಚುನಾವಣೆ ನಡೆಸುವುದು ಅನುಮಾನ. ಆದರೂ ಬಿಜೆಪಿ ತಯಾರಿ ಮಾಡಿಕೊಳ್ಳುವುದು ಎಂದು ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಬಿಎಲ್‌ಎಗಳ ಸಭೆಯಲ್ಲಿ ಮಾತನಾಡಿ, 19 ವರ್ಷಗಳಿಂದ ಅಧಿಕಾರ ಅನುಭವಿಸಿದ ಬಿಜೆಪಿ ಕಾರ್ಯಕರ್ತರಿಗೆ ಈಗ ಕಷ್ಟ ಅನಿಸಬಹುದು. ಕಾಲ ಹೀಗೆಯೇ ಇರುವುದಿಲ್ಲ ಎನ್ನುವುದನ್ನು ಪ್ರತಿಯೊಬ್ಬರೂ ಮನಗಾಣಬೇಕು ಎಂದರು.
ಪರಿಸ್ಥಿತಿ ಜತೆಗೆ ರಾಜಿ ಮಾಡಿಕೊಂಡು ಬದುಕುವವರಿಗೆ ಹೆಜ್ಜೆಗುರುತು ಮೂಡಿಸಲು ಸಾಧ್ಯವಿಲ್ಲ. ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸುವವರು ಇತಿಹಾಸದಲ್ಲಿ ಶಾಶ್ವತವಾಗಿ ಸ್ಥಾನ ಗಳಿಸುತ್ತಾರೆ ಎಂದು ಹೇಳಿದರು.
ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಪಕ್ಷ ಕಟ್ಟಿದವರಿಗೆ ಹೋಲಿಸಿದರೆ ಇಂದು ಪಕ್ಷ ಕಟ್ಟುವುದು ಕಷ್ಟವೇನಲ್ಲ. ಹಿಂದೆ ಯಾವುದೇ ವಿಷಯವನ್ನು ಪ್ರಶ್ನಿಸಲು ಕಸಿವಿಸಿ ಆಗುತ್ತಿತ್ತು. ಈಗ ಅದಕ್ಕೆ ಅವಕಾಶವಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಪ್ರಶ್ನಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಜನಪರ ಹೋರಾಟದ ಮೂಲಕ ನಾಯಕತ್ವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಪ್ರಮುಖರಾದ ಕೋಟೆ ರಂಗನಾಥ್, ಈಶ್ವರಳ್ಳಿ ಮಹೇಶ್, ಬೆಳವಾಡಿ ರವೀಂದ್ರ, ಕೆ.ಪಿ.ವೆಂಕಟೇಶ್, ವಿಜಯಕುಮಾರ್, ಸುಧೀರ್, ಸೀತಾರಾಮ ಭರಣ್ಯ, ಅವಿನಾಶ್ ಪಿಳ್ಳೇನಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net