ಬಹುಮಾನ ಪಡೆದಿದ್ದು ಸಂಸ್ಥೆಗೆ ಗೌರವ

kota (7)
Published on

ಕೋಟ: ಯಕ್ಷ ನುಡಿಸಿರಿ ಬಳಗದ ಸದಸ್ಯರು ನಿರಂತರವಾಗಿ ಯಶಸ್ವಿ ಕಲಾವೃಂದದ ವೇದಿಕೆಯಲ್ಲಿ ಅಭ್ಯಾಸ ನಡೆಸಿ ಬಹುವಾನ ಪಡೆದಿರುವುದು ನಮ್ಮ ಸಂಸ್ಥೆಗೆ ಗೌರವದ ಸಂಗತಿ. ಪಟ್ಲ ದಶಮ ಸಂಭ್ರಮದಲ್ಲಿ ಆಯೋಜಿಸಿದ್ದ ಬಡಗುತಿಟ್ಟು ಯುವ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ಬಹುವಾನ ಪಡೆದಿದ್ದು ನಮಗೂ ಸಂಭ್ರಮ ಎಂದು ಯಶಸ್ವಿ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ ವೈದ್ಯ ಹೇಳಿದರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಬುಧವಾರ ಯಕ್ಷ ನುಡಿಸಿರಿ ಬಳಗದ ಎಲ್ಲ ಕಲಾವಿದರನ್ನು ಗೌರವಿಸಿ ಮಾತನಾಡಿದರು.

ಸಂಸ್ಥೆ ಮುಖ್ಯಸ್ಥ ಡಾ.ಜಗದೀಶ್ ಶೆಟ್ಟಿ ವಾತನಾಡಿ, ಕಲೆಯನ್ನು ತಪಸ್ಸಿನಂತೆ ಆರಾಧಿಸುತ್ತಿರುವ ಯಶಸ್ವಿ ಕಲಾವೃಂದ ಎಲ್ಲ ಕಲಾ ಮನಸ್ಸುಗಳಿಗೆ ಸಹಕಾರಿಯಾಗಿ ನಿಂತಿರುವುದು ಕಲಾವಿದರಿಗೆ ಹೆಮ್ಮೆಯ ವಿಷಯ ಎಂದರು.

ಭಾಗವತ ಸುರೇಶ್ ಶೆಟ್ಟಿ ಶಂಕರನಾರಾಯಣ, ನಿರ್ದೇಶಕ ನರಸಿಂಹ ತುಂಗ, ಯಲ್ಲಾಪುರ ರಾವೇಂದ್ರ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net