

ಬೆಳಗಾವಿ: ವನಮಹೋತ್ಸವ ಮಾಡಿ ಸಸಿ ನೆಟ್ಟರೆ ಸಾಲದು. ಅವುಗಳನ್ನು ಸಂರಕ್ಷಿಸಿ ಬೆಳೆಸುವುದು ಸಹ ಅಷ್ಟೇ ಮುಖ್ಯ ಎಂದು ಸಿಜಿಕೆ ಕನಸ್ಟ್ರಕ್ಷನ್ಸ್ ಮತ್ತು ರಿಯಲ್ ಎಸ್ಟೇಟ್ ಕಂಪನಿಯ ಚೇರ್ಮನ್, ಕ್ರೆಡೈ ಮಾಜಿ ರಾಜ್ಯಾಧ್ಯಕ್ಷ ಚೈತನ್ಯ ಕುಲಕರ್ಣಿ ಹೇಳಿದರು.
ಬೆಳಗಾವಿಯ ರಾಣಿ ಚನ್ನಮ್ಮ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಪ್ರಯತ್ನ ಸಂಘಟನೆ ಮಂಗಳವಾರ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದು ಎಲ್ಲೆಡೆ ಹವಾಮಾನ ವೈಪರೀತ್ಯ ನೋಡುತ್ತಿದ್ದೇವೆ. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ಸಸಿ ನೆಡುವ ಅಗತ್ಯವಿದ್ದು, ಅವುಗಳ ಸಂರಕ್ಷಣೆಯೂ ಮುಖ್ಯವಾಗಿದೆ ಎಂದರು.
ಗಿಡಗಳ ರಕ್ಷಣೆಗೆ ತಮ್ಮದೇ ಫ್ಯಾಕ್ಟರಿಯಲ್ಲಿ ತಯಾರಿಸಿದ ಉತ್ತಮ ಗುಣಮಟ್ಟದ ಟ್ರೀ ಗಾರ್ಡ್‌ಗಳನ್ನು ಚೈತನ್ಯ ಕುಲಕರ್ಣಿ ದೇಣಿಗೆಯಾಗಿ ನೀಡಿದರು. ಉದ್ಯಮಿ ಭರತ ದೇಶಪಾಂಡೆ ಮಕ್ಕಳಿಗಾಗಿ ನೀಡಿದ ರೇನ್ ಕೋಟ್‌ಗಳನ್ನು ವಿತರಿಸಲಾಯಿತು. ಪ್ರಯತ್ನ ಸಂಘಟನೆ ಅಧ್ಯಕ್ಷೆ ಶಾಂತಾ ಆಚಾರ್ಯ, ಸಮಾಜ ಸೇವಕರಾದ ಶೀಲಾ ದೇಶಪಾಂಡೆ, ರಾಧಿಕಾ ಮಿರ್ಜಿ, ಹಿರಿಯ ಪತ್ರಕರ್ತ ಎಂ.ಕೆ.ಹೆಗಡೆ, ಶಾಲಾಭಿವೃದ್ದಿ ಸಮಿತಿ ಸದಸ್ಯ ಜಗದೀಶ ಬಡಿಗೇರ, ಪ್ರಯತ್ನ ಸಂಘಟನೆಯ ಕಾರ್ಯದರ್ಶಿ ಗೌರಿ ಸರ್ನೋಬತ್, ಸದಸ್ಯರಾದ ವೆಂಕಟೇಶ ಸರ್ನೋಬತ್, ಶ್ವೇತಾ ಬಿಜಾಪುರೆ, ಸುನೀತಾ ಭಟ್, ವರದಾ ಭಟ್, ಪದ್ಮಾ ವೇರ್ಣೇಕರ, ಬೀನಾ ರಾವ್, ಶುಭಾ ಹೆಗಡೆ, ರೇವತಿ ಶರ್ಮಾ, ಹೇಮಾ ಮುತಾಲಿಕ, ಲತಾ ಕಟ್ಟಿ, ವೀಣಾ ಕುಲಕರ್ಣಿ, ಅಪರ್ಣಾ ಪವಾರ, ಶುಭಾ ಕಡಗದಕೈ, ಎಂ.ಜಿ.ಭಟ್, ಶಿಕ್ಷಕರಾದ ಎ.ಕೆ.ಜೋಶಿ, ಎಲ್.ಬಿ.ಹೊಸಮನಿ, ಸೌಮ್ಯ ಮಾನೆ, ಶಿಲ್ಪಾ ಡಿ., ಯಶ್ ಬಡಾಲೆ ಇತರರಿದ್ದರು. ಮುಖ್ಯಾಧ್ಯಾಪಕ ಎಸ್.ಬಿ.ಹುಬ್ಬಳ್ಳಿ ಸ್ವಾಗತಿಸಿದರು. ಶಿಕ್ಷಕಿ ಶುಭಾ ಭಟ್ ನಿರೂಪಿಸಿದರು. ಮಹಾದೇವ ಮಾನೆ ವಂದಿಸಿದರು.