ಮಹಿಳೆಯರೂ ವ್ಯಸನಿಗಳಾಗುತ್ತಿರುವುದು ವಿರ್ಪಯಾಸ

25jyp1
Published on

ಜಯಪುರ: ಮನೋರಂಜನೆಗಾಗಿ ಹುಟ್ಟಿಕೊಂಡ ಮದ್ಯಪಾನ ಇಂದು ಮದ್ಯ ವ್ಯಸನಕ್ಕೆ ಕಾರಣವಾಗುತ್ತಿದೆ. ಹಿಂದೆ ಪುರುಷರು ಮಾತ್ರ ಕುಡಿಯುತ್ತಿದ್ದರು ಇಂದು ಮಹಿಳೆಯರು ಕುಡಿಯುತ್ತಿರುವುದು ವಿಪರ್ಯಾಸ ಎಂದು ಜಯಪುರ ಪಿಎಸ್‌ಐ ಅಂಬರೀಶ್ ಹೇಳಿದರು.

ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ.),ಪ್ರಗತಿ ಬಂಧು ಸ್ವಸಾಯ ಸಂಘಗಳ ಒಕ್ಕೂಟಗಳ ಜಯಪುರ ವಲಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಯಪುರದ ಮಕ್ಕಿಕೊಪ್ಪ ಶ್ರೀ ಸತ್ಯಸಾಯಿ ನಿಕೇತನ ಸೇವಾ ಮಂದಿರದಲ್ಲಿ ಆಯೋಜಿಸಿದ್ದ 1878ನೇ ಮದ್ಯವರ್ಜನ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಯಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಸ್ತುತ ಸಾಲಿನಲ್ಲಿ 10 ಜನ ಮದ್ಯಪಾನದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದ್ಯ ಸೇವನೆಯಿಂದ ಜೀವ ಮತ್ತು ಜೀವನ ಎರಡೂ ಹಾಳಾಗಲಿದೆ ಎಂದರು.

ಶೃಂಗೇರಿ ವಲಯ ಮೇಲ್ವಿಚಾರಕ ನಾಗರಾಜ್ ಮಾತನಾಡಿ, ಓರ್ವ ವ್ಯಕ್ತಿ ಶ್ರಮಪಟ್ಟು ದುಡಿದ ಹಣ ಮನೆ ತಲುಪುವ ಬದಲು ಮದ್ಯದ ಅಂಗಡಿ ಸೇರುತ್ತಿದೆ. ನಮ್ಮ ಯೋಜನೆ ಮೂಲಕ ಸುಮಾರು 1,877 ಶಿಬಿರಗಳನ್ನು ನಡೆಸಿದ್ದು, 1 ಲಕ್ಷದ 25 ಸಾವಿರ ಜನ ಕುಡಿತ ಬಿಟ್ಟಿದ್ದಾರೆ. ಇಂದು 1,878ನೇ ಶಿಬಿರ ನಡೆಯುತ್ತಿದೆ. ಶಿಬಿರದಲ್ಲಿ ಯೋಗ, ಪ್ರಾಣಾಯಾಮ, ಧ್ಯಾನ, ಉತ್ತಮ ಸಂದೇಶ ನೀಡುವ ಮೂಲಕ ಜೀವನದ ಅರಿವು ಮೂಡಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net