ಅನುದಾನ ನೀಡದಿರುವುದು ಬೇಸರದ ಸಂಗತಿ

3 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ರಂಗಾಯಣಗಳಿಗೆ ಸರ್ಕಾರ ಅನುದಾನ ನೀಡದಿರುವುದು ಬೇಸರದ ಸಂಗತಿ. ರಂಗಭೂಮಿಯವರು ಕಲೆಯಲ್ಲಿ ಶ್ರೀಮಂತರು. ಆ ಶ್ರೀಮಂತಿಕೆಯನ್ನು ಹಣದಿಂದ ಅಳೆಯವುದು ಅಸಾಧ್ಯ. ಸರ್ಕಾರಗಳ ಎದುರು ಎಷ್ಟು ಅಂತಾ ಕೈ ಚಾಚಿ ನಿಲ್ಲಬೇಕು? ರಂಗ ಉತ್ಸವಗಳನ್ನಾದರೂ ನೋಡಿ ಸರ್ಕಾರಗಳು ಬುದ್ಧಿ ಕಲಿಯಲಿ ಎಂದು ನಟ ಪ್ರಕಾಶ ರಾಜ್​ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ಸವಗಳನ್ನು ನಡೆಸುವ ಮೂಲಕ ಪ್ರಗತಿಶೀಲರು, ನಾಟಕಕಾರರು, ಬರಹಗಾರರು ಒಂದಾಗಬೇಕು. ಅಂದಾಗ ಸರ್ಕಾರ ನಮ್ಮತ್ತ ಗಮನಹರಿಸಿ ಅನುದಾನ ನೀಡುವ ಬಗ್ಗೆ ಯೋಚಿಸಲಿದೆ. ನಮ್ಮ ನಿರ್ದಿಗಂತದ ರಂಗ ಚಟುವಟಿಕೆಗಳಿಗೆ ಸರ್ಕಾರದ ಸಹಾಯ ಬೇಡ. ಯಾವುದೇ ಸರ್ಕಾರ ಬಂದರೂ ತಮ್ಮ ಆಲೋಚನೆಗಳನ್ನು ಮಾತ್ರ ಹೇಳುತ್ತಾರೆ. ಹೀಗಾಗಿ ನಮ್ಮ ನಿರ್ದಿಗಂತದ ರಂಗ ಚಟುವಟಿಕೆಗಳಿಗೆ ಸರ್ಕಾರದ ಅನುದಾನ ಬೇಡ ಎಂದರು.

ಪ್ರಯಾಗರಾಜ್​ನ ಕುಂಭಮೇಳದಲ್ಲಿ ನಟ ಪ್ರಕಾಶ ರಾಜ್​ ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಂತೆ ಫೋಟೊ ಎಡಿಟ್​ ಮಾಡಿ ಹರಿ ಬಿಟ್ಟಿರುವುದು ಅಕ್ಷಮ್ಯ ಅಪರಾಧ. ಸುಳ್ಳು ಸುದ್ದಿ ಹಬ್ಬಿಸಬಾರದು. ಈ ವಿಚಾರವಾಗಿ ಪ್ರಕರಣ ದಾಖಲಾಗಿದೆ. ಅದಕ್ಕೆ ಸಂಬಂಧಿಸಿದವರು ಉತ್ತರ ಕೊಡಬೇಕಾಗುತ್ತದೆ. ಕಳ್ಳರು, ಸುಳ್ಳರ ಬಗ್ಗೆ ಈಗ ಮಾತು ಬೇಡ. ನಾನು ನಿರ್ದಿಗಂತ ಉತ್ಸವದ ಬಗ್ಗೆ ಮಾತನಾಡಲು ಬಂದಿದ್ದೇನೆ ಎಂದು ಪ್ರಕಾಶ ರಾಜ್​ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net