ತುಳುನಾಡಿನ ಸಂಸ್ಕೃತಿ ಪರಿಚಯ ಹೆಮ್ಮೆಯ ವಿಚಾರ: ರಕ್ಷಿತ್ ಶಿವರಾಂ ಹೇಳಿಕೆ

Bel_Rakshith
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ತುಳುವ ಪಾಡ್ದನದ ಡೆನ್ನಾನ ಡೆನ್ನನ ಎಂಬ ಪದದಲ್ಲಿ ಇಡೀ ತುಳುವ ಸಂಸತಿ ಇದೆ. ಅದೇ ಹೆಸರಿನಲ್ಲಿ ಯುವವಾಹಿನಿ ಕಾರ್ಯಕ್ರಮ ಸಂಯೋಜಿಸಿ ಬಿಲ್ಲವ ಸಮಾಜದ ಮತ್ತು ತುಳುನಾಡಿನ ಸಾಂಸ್ಕೃತಿಕ ಹಿನ್ನೆಲೆ ಪರಿಚಯ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದು ಬೆಳ್ತಂಗಡಿ ಬೆಸ್ಟ್​ ಫೌಂಡೇಷನ್​ ಅಧ್ಯಕ್ಷ ರಕ್ಷಿತ್ ಶಿವರಾಂ ಹೇಳಿದರು.

ಭಾನುವಾರ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸಭಾ ಭವನದಲ್ಲಿ ಅ.27ರಂದು ಯುವವಾಹಿನಿ ಕೇಂದ್ರ ಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿ ಘಟಕದ ಅತಿಥ್ಯದಲ್ಲಿ ನಡೆಯುವ ಯುವವಾಹಿನಿ ಅಂತರ್​ ಘಟಕ ಸಾಂಸ್ಕೃತಿಕ ಸ್ಪರ್ಧೆ 'ಡೆನ್ನಾನ ಡೆನ್ನನ &2024' ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯ ವಿಕ್ರಮ್​ ಕಲ್ಲಾಪು ಮಾತನಾಡಿದರು. ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ಸದಾಶಿವ ಊರ ಅಧ್ಯಕ್ಷತೆ ವಹಿಸಿದ್ದರು.

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂದ ಉಪಾಧ್ಯಕ್ಷ ಸುಂದರ ಪೂಜಾರಿ, ಯುವವಾಹಿನಿ ಬೆಳ್ತಂಗಡಿ ಘಟಕದ ಮಾಜಿ ಅಧ್ಯಕ್ಷರಾದ ಹರೀಶ್​ ಕನ್ಯಾಡಿ, ಅಶ್ವಥ್​ ಕುಮಾರ್​, ಪ್ರಶಾಂತ್​ ಮಚ್ಚಿನ, ಪ್ರಸಾದ್​ ಎಂ.ಕೆ., ಸುಜಾತ ಅಣ್ಣಿ ಪೂಜಾರಿ, ಸಲಹೆಗಾರರಾದ ರಮಾನಂದ ಸಾಲಿಯಾನ್​, ಮಹಿಳಾ ಸಂಚಲನ ಸಮಿತಿ ಅಧ್ಯಕ್ಷೆ ವನಿತಾ ಜನಾರ್ದನ, ವೇಣೂರು ಘಟಕದ ಅಧ್ಯಕ್ಷ ಶುಭಕರ ಪೂಜಾರಿ, ಬೆಳ್ತಂಗಡಿ ಮಹಿಳಾ ಬಿಲ್ಲವ ವೇದಿಕೆ ಕಾರ್ಯದರ್ಶಿ ಶಾಂಭವಿ ಉಪಸ್ಥಿತರಿದ್ದರು.

ಘಟಕದ ಸ್ಥಾಪಕಾಧ್ಯಕ್ಷ ರಾಕೇಶ್​ ಕುಮಾರ್​ ಮೂಡುಕೋಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಚಂದ್ರಹಾಸ ಬಳಂಜ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net