ಹುಟ್ಟಿದ ಊರಲ್ಲಿ ಸೇವೆಗೆ ಅವಕಾಶ ಸಿಕ್ಕಿದ್ದು ಪುಣ್ಯ

2 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ನನ್ನ ನೆಲ. ನಾನು ಹುಟ್ಟಿ ಬೆಳೆದ, ಅರ ಕಲಿಸಿದ ಊರು. ಹುಟ್ಟಿ ಬೆಳೆದ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ನಗರದ ಆಲೂರು ವೆಂಕಟರಾವ್​ ಭವನದಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಶನಿವಾರ ಆಯೋಜಿಸಿದ್ದ ನಿರ್ಗಮಿತ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಬೀಳ್ಕೊಡುಗೆ ಹಾಗೂ ನೂತನ ಡಿಸಿ ದಿವ್ಯ ಪ್ರಭು ಸ್ವಾಗತ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಧಾರವಾಡ ಅರ, ನೈತಿಕ ಶಿಕ್ಷಣ, ಸಂಸತಿ ಮತ್ತು ಉತ್ತಮ ಸಂಸ್ಕಾರ ಬೆಳೆಸುತ್ತದೆ. ಪ್ರಾಮಾಣಿಕವಾಗಿ ಬದುಕುವ ಕಲೆ, ಜೀವನಶೈಲಿ ಕಲಿಸುತ್ತದೆ. ನನ್ನ ಐಎಎಸ್​ ವೃತ್ತಿ ಜೀವನದ ಆರಂಭದಲ್ಲಿ ನಾನು ಹಿರಿಯ ಅಧಿಕಾರಿಗಳಿಂದ ಪಡೆದ ಮಾರ್ಗದರ್ಶನವನ್ನು ಇಂದಿಗೂ ಪಾಲಿಸಿಕೊಂಡು ಬಂದಿದ್ದೇನೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಧಿಕಾರಿಗಳಿಗೆ ಹೃದಯವಂತಿಕೆ ಇದ್ದಾಗ ಮಾತ್ರ ರಣೆ, ನ್ಯಾಯ ಬಯಸಿ ಬರುವವರಿಗೆ ಸೇವೆ ಸಲ್ಲಿಸಲು ಸಾಧ್ಯ. ಗುರುದತ್ತ ಹೆಗಡೆ ಚಾಣಾ ಮತ್ತು ಉತ್ತಮ ಆಡಳಿತಗಾರ. ನೂತನ ಜಿಲ್ಲಾಧಿಕಾರಿ ದಿವ್ಯ ಪ್ರಭು ಸಮರ್ಥ ಆಡಳಿತಗಾರರಾಗಿದ್ದು, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕ್ರಮವಹಿಸಿದ್ದಾರೆ ಎಂದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಗುರುದತ್ತ ಹೆಗಡೆ ಮತ್ತು ನಾನು ಒಂದೇ ಬ್ಯಾಚ್​. ಜಿಲ್ಲೆಗೆ ಉತ್ತಮ ಆಡಳಿತ ನೀಡಿದ್ದಾರೆ. ಜಿಲ್ಲೆಯ ಎಲ್ಲ ನೌಕರರು ಅವರಿಗೆ ನೀಡಿದ್ದ ಸಹಕಾರವನ್ನು ನನಗೂ ನೀಡುತ್ತಾರೆ ಎಂಬ ಭರವಸೆ ಇದೆ. ಎಲ್ಲರೂ ಸೇರಿ ಜಿಲ್ಲೆ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯೋಣ ಎಂದರು.
ಪೊಲೀಸ ಆಯುಕ್ತೆ ರೇಣುಕಾ ಸುಕುಮಾರ, ಜಿಲ್ಲಾ ಪೊಲೀಸ್​ ಅಧೀಕ ಡಾ.ಗೋಪಾಲ ಬ್ಯಾಕೋಡ, ಮೇಜರ್​ ಸಿದ್ದಲಿಂಗಯ್ಯ ಹಿರೇಮಠ, ಯಲ್ಲಪ್ಪ ಗೊಣೆನ್ನನವರ, ಮಲ್ಲಿಕಾರ್ಜುನ ಸೊಲಗಿ, ವೆಂಕಟೇಶ ಹಟ್ಟಿಯವರ, ಭರತ ಎಸ್​., ಮೂನಾ ರಾವುತ, ಡಾ.ಸಂತೋಷಕುಮಾರ ಬಿರಾದಾರ, ಶಾಲಂ ಹುಸೇನ್​, ಎಸ್​.ಎ್​.ಸಿದ್ದನಗೌಡರ, ವಿವಿಧ ಇಲಾಖೆ ಅಧಿಕಾರಿಗಳು, ಇತರರು ಇದ್ದರು.
ವಿಜಯಲಕ್ಷಿ$್ಮ ಎಚ್​. ನಿರೂಪಿಸಿದರು. ಡಾ.ಡಿ.ಎಚ್​.ಹೂಗಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net