ಕುದ್ಕಾಡಿ ಮನೆ ದರೋಡೆ ಪ್ರಕರಣ - ಆರು ಮಂದಿ ಬಂಧನ

Crime Logo
Published on

ಪುತ್ತೂರು ಗ್ರಾಮಾಂತರ : ಪಡುವನ್ನೂರು ಗ್ರಾಮದ ಕುದ್ಕಾಡಿ ಎಂಬಲ್ಲಿನ ಮನೆಯೊಂದರಿAದ ಕಳೆದ ಸೆ.6ರಂದು ರಾತ್ರಿ ನಡೆದಿದ್ದ ಚಿನ್ನಾಭರಣ-ನಗದು ಹಣ ದರೋಡೆ ಪ್ರಕರಣವನ್ನು ಬೇಧಿಸಿರುವ ವಿಶೇಷ ಪೊಲೀಸ್ ತಂಡವರು ಕುಖ್ಯಾತ ದರೋಡೆ ತಂಡದ ಎಲ್ಲಾ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಟ್ವಾಳ ತಾಲೂಕಿನ ವಿಟ್ಲ ಪೆರುವಾಯಿಯ ಸುಧೀರ್ ಮಣಿಯಾಣಿ,ಕೇರಳದ ಇಚ್ಲಂಗೋಡು ಗ್ರಾಮದ ಪಚ್ಚಂಗಳದ ರವಿ, ಪೈವಳಿಕೆ ಸಮೀಪದ ಅಟ್ಟಿಗೋಳಿಯ ಕಿರಣ್, ಸೀತಾಂಗೊಳ್ಳಿ ಸಮೀಪದ ಬಾಡೂರಿನ ವಸಂತ್, ಕೇರಳದ ಫೈಝಲ್ ಮತ್ತು ಕಾಸರಗೋಡಿನ ಎಡನಾಡ್ ಗ್ರಾಮದ ರಾಜೀವ ಗಾಂಧಿ ನಗರದ ಅಬ್ದುಲ್ ಸಿಸಾರ್ ಬಂಧಿತ ಆರೋಪಿಗಳು.

ಸುಧೀರ್ ಸೂತ್ರಧಾರಿ…
ಕುಡ್ಕಾಡಿ ತರವಾಡಿನ ದೈವಗಳ ನೇಮೋತ್ಸವಕ್ಕೆ ಕೇರಳದಿಂದ ಬರುವ ಕುಟುಂಬವೊAದರ ಕಾರಿನ ಚಾಲಕನಾಗಿ ಬಂದಿದ್ದ ಸುಧೀರ್ ಮಣಿಯಾಣಿ, ಗುರುಪ್ರಸಾದ್ ರೈ ಅವರ ಮನೆಯ ಬಗ್ಗೆ ಮಾಹಿತಿ ಪಡೆದುಕೊಂಡು ದರೋಡೆ ತಂಡಕ್ಕೆ ಮಾಹಿತಿ ನೀಡಿದ್ದು ಮಾತ್ರವಲ್ಲದೆ ದರೋಡೆಯಲ್ಲಿ ಭಾಗಿಯಾಗಿದ್ದ. ಈತನೇ ಈ ದರೋಡೆ ಪ್ರಕರಣದ ಸೂತ್ರಧಾರನಾಗಿದ್ದ ಎಂಬ ಮಾಹಿತಿ ಲಭಿಸಿದೆ.

ಮುಸುಕುಧಾರಿ ದರೋಡೆಕೋರರ ತಂಡವೊAದು ಸೆ.6ರಂದು ತಡರಾತ್ರಿ ವೇಳೆ ಬಡಗನ್ನೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಕಾಂಗ್ರೆಸ್ ಮುಖಂಡ ಗುರುಪ್ರಸಾದ್ ರೈ ಅವರ ಕುದ್ಕಾಡಿ ತೋಟದಮೂಲೆ ಎಂಬಲ್ಲಿರುವ ಮನೆಯ ಹಿಂಬದಿಯ ಬಾಗಿಲು ಒಡೆದು ಒಳನುಗ್ಗಿ ಗುರುಪ್ರಸಾದ್ ಅವರನ್ನು ಕಟ್ಟಿಹಾಕಿ, ಅವರ ತಾಯಿ ಕಸ್ತೂರಿ ರೈ ಅವರಿಗೆ ಮಾರಕಾಯುಧಗನ್ನು ಹಿಡಿದು ಬೆದರಿಸಿ ಸೋಫಾದಲ್ಲಿ ಕುಳ್ಳಿರಿಸಿ, ಚಿನ್ನದ ಸರ, 4 ಚಿನ್ನದ ಬಳೆಗಳ ಸಹಿತ ಒಟ್ಟು ರೂ.2.40 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ರೂ.30ಸಾವಿರ ನಗದುಹಣ ದರೋಡೆ ಮಾಡಿತ್ತು.ಈ ವಿಚಾರವನ್ನು ಬೇರೆಯವರಿಗೆ ತಿಳಿಸಿದರೆ, ಪೊಲೀಸರಿಗೆ ದೂರು ನೀಡಿದರೆ ಮುಂದಕ್ಕೆ ಜೀವ ಸಹಿತ ಬಿಡುವುದಿಲ್ಲ ಎಂದು ದರೋಡೆಕೋರರು ಬೆದರಿಕೆಯೊಡ್ಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net