ಮಧುಭಾನ ಸೊಪ್ಪಿನ ಪಾಯಸ ವಿತರಣೆ

3spt3
ಸೋಮವಾರಪೇಟೆ ಸಮೀಪದ ಐಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆಟಿ 18ರ ಅಂಗವಾಗಿ ಶಾಲಾ ಮಕ್ಕಳಿಗೆ ಬಿಸಿಯೂಟದೊಂದಿಗೆ ಮಧುಭಾನ ಸೊಪ್ಪಿನ ಪಾಯಸ ಬಡಿಸಲಾಯಿತು.
Published on

ಸೋಮವಾರಪೇಟೆ: ಐಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆಟಿ 18ರ ಅಂಗವಾಗಿ ಶಾಲಾ ಮಕ್ಕಳಿಗೆ ಬಿಸಿಯೂಟದೊಂದಿಗೆ ಶನಿವಾರ ಮಧುಭಾನ ಸೊಪ್ಪಿನ ಪಾಯಸ ವಿತರಿಸಲಾಯಿತು.


ಕೊಡಗಿನಲ್ಲಿ ಆಟಿ 18ರ ಸಂದರ್ಭ ಔಷಧೀಯ ಗುಣಗಳುಳ್ಳ ಸೊಪ್ಪಿನ ಮಹತ್ವದ ಕುರಿತು ಮುಖ್ಯಶಿಕ್ಷಕ ಯಶ್ವಂತ್ ಕುಮಾರ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಮಧುಭಾನ ಸೊಪ್ಪಿನಿಂದ ಮಾಡಿದ ಖಾದ್ಯಗಳಲ್ಲಿ ಔಷಧಿ ಗುಣವಿರುತ್ತದೆ ಎಂಬ ನಂಬಿಕೆ ಜನರಲ್ಲಿದೆ. ವರ್ಷಕ್ಕೊಮ್ಮೆ ಈ ಸೊಪ್ಪಿನಿಂದ ತಯಾರಿಸಿದ ಖಾದ್ಯ ಸೇವಿಸುವುದು ವಾಡಿಕೆ. ವಿಶೇಷ ಪರಿಮಳಯುಕ್ತವಾಗಿರುವ ಈ ಗಿಡಕ್ಕೆ ಆರೋಗ್ಯಪೂರಕ ಹಾಗೂ ಹಲವು ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದು ಹೇಳಿದರು.

ಸಹಶಿಕ್ಷಕರಾದ ಎಸ್.ಎಸ್.ರಂಜಿತ, ಕೃಷ್ಣಪ್ಪ, ರೇಖಾ, ಮಂಜುನಾಥ್, ಗುಲಾಬಿ ಮತ್ತು ಅಕ್ಷರ ದಾಸೋಅ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net