ಆಯಿಷ್‌ನಲ್ಲಿ ಮಕ್ಕಳಿಗೆ ಶ್ರವಣ ಸಾಧನ ವಿತರಣೆ

Aiish
Published on

ಮೈಸೂರು: ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್), ಹೈದರಬಾದ್‌ನ ಆಶ್ರಯ ಅಕೃತಿ ಎನ್‌ಜಿಒ ವತಿಯಿಂದ ಆಯಿಷ್‌ನಲ್ಲಿ ಮಂಗಳವಾರ ಶ್ರವಣದೋಷವುಳ್ಳ ಮಕ್ಕಳಿಗೆ ಹಾಗೂ ಹಿರಿಯರಿಗೆ ಉಚಿತವಾಗಿ ಡಿಜಿಟಲ್ ಶ್ರವಣ ಸಾಧನಗಳನ್ನು ವಿತರಿಸಲಾಯಿತು.

ಆಶ್ರಯ್ ಆಕೃತಿ ಸಂಸ್ಥೆ ನಿರ್ದೇಶಕ ಡಿಪಿಕೆ ಬಾಬು ಮಾತನಾಡಿ, ಮಕ್ಕಳು ಹಾಗೂ ಹಿರಿಯರು ಸೇರಿದಂತೆ ಒಟ್ಟಾರೆ 50 ಮಂದಿಗೆ ಡಿಜಿಟಲ್ ಶ್ರವಣ ಸಾಧನಗಳನ್ನು ವಿತರಿಸಲಾಗಿದೆ. ಶ್ರವಣದೋಷ ಸಮಸ್ಯೆ ಎದುರಿಸುತ್ತಿರುವ ಬಡ ವರ್ಗದ ಮಕ್ಕಳಿಗೆ ಶ್ರವಣ ಸಾಧನಗಳನ್ನು ಕೊಡಿಸುವಷ್ಟು ಸಾಮರ್ಥ್ಯ ಪಾಲಕರಿಗೆ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆಯಿಂದ ಡಿಜಿಟಲ್ ಶ್ರವಣ ಸಾಧನಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 50 ಜನರಿಗೆ ಶ್ರವಣ ಸಾಧನಗಳನ್ನು ನೀಡಲಾಗುವುದು ಎಂದರು.

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿರ್ದೇಶಕಿ ಡಾ.ಎಂ.ಪುಷ್ಪವತಿ ಮಾತನಾಡಿ, ಕಿವಿ ಕೇಳದ ಮಕ್ಕಳು ಹಾಗೂ ಹಿರಿಯರಿಗೆ ಆತ್ಮವಿಶ್ವಾಸ ಮೂಡಿಸಿ, ಅವರ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಬೇಕು. ಯಾರಿಗೂ ನಾವು ಬೇಸರ ಮೂಡಿಸುವ ತರ ನಡೆದುಕೊಳ್ಳಬಾರದು ಎಂದು ಹೇಳಿದರು.

ಬಡತನ ರೇಖೆಗಿಂತ ಕೆಳಗೆ ಇರುವವರ ಮಕ್ಕಳಿಗೆ ಶ್ರವಣದೋಷ ಉಂಟಾದರೆ ಶ್ರವಣ ಸಾಧನಗಳನ್ನು ತೆಗೆದುಕೊಳ್ಳಲು ಕಷ್ಟಪಡುತ್ತಾರೆ. ಅಂತಹ ಸಂದರ್ಭದಲ್ಲಿ ನಮ್ಮ ಸಂಸ್ಥೆಯನ್ನು ಸಂಪರ್ಕ ಮಾಡಿದರೆ ಅನುಕೂಲ ಮಾಡಿಕೊಡಲಾಗುವುದು. ಪ್ರತಿಯೊಬ್ಬರಿಗೂ ಕಿವಿ ಬಗ್ಗೆ ಕಾಳಜಿ ಇರಬೇಕು, ಶ್ರವಣಯಂತ್ರ ಪಡೆದವರು ಯಂತ್ರವನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net